alex Certify
ಕನ್ನಡ ದುನಿಯಾ       Mobile App
       

Kannada Duniya

ಅಂಬಾನಿ ಪುತ್ರನ ವಿವಾಹ ನಡೆಯೋದೆಲ್ಲಿ ಗೊತ್ತಾ…?

ರಾಜಸ್ಥಾನದ ಉದಯ್ಪುರ್ ಅನೇಕರ ವಿವಾಹ ಸಂಭ್ರಮಗಳಿಗೆ ಸಾಕ್ಸಿಯಾಗಿದೆ. ಬಾಲಿವುಡ್ ನಟ-ನಟಿಯರು, ಬ್ಯುಸಿನೆಸ್ ಮ್ಯಾನ್ ಗಳ ಮದುವೆಗೆ ನೆಚ್ಚಿನ ತಾಣವಾಗಿಬಿಟ್ಟಿದೆ. ಐಷಾರಾಮಿ ಮದುವೆಗಳೆಲ್ಲಾ ಉದಯ್ಪುರದ ಅರಮನೆಯಲ್ಲಿ ನಡೀತಿದೆ. ಈಗ ಅಲ್ಲಿ ಮತ್ತೊಂದು ಐಷಾರಾಮಿ ಮದುವೆ ನಡೆಯುವ ಸಾಧ್ಯತೆ ಇದೆ ಅಂತ ಹೇಳಲಾಗ್ತಿದೆ.

ಆ ಮದುವೆ ಬೇರಾರದ್ದೋ ಅಲ್ಲ ಮುಕೇಶ್ ಅಂಬಾನಿ ಪುತ್ರ ಆಕಾಶ್ ಅಂಬಾನಿ ಮತ್ತು ಶ್ಲೋಕಾ ಮೆಹ್ತಾರದ್ದು. ಸರೋವರಗಳ ನಗರಿ ಅಂತಾನೇ ಹೆಸರುವಾಸಿಯಾಗಿರುವ ಉದಯ್ಪುರ್ ನಲ್ಲಿ ಮಗನ ಮದುವೆ ನಡೆಸೋ ಬಗ್ಗೆ ಮುಕೇಶ್ ಅಂಬಾನಿ ಕುಟುಂಬ ಚಿಂತನೆ ನಡೆಸಿದೆಯಂತೆ.

ಕೆಲ ತಿಂಗಳ ಹಿಂದೆ ಆಕಾಶ್ ಅಂಬಾನಿ ಮತ್ತು ಶ್ಲೋಕಾ ಮೆಹ್ತಾ ಅವರ ನಿಶ್ಚಿತಾರ್ಥದ ಕಾರ್ಯ ಅದ್ಧೂರಿಯಾಗಿ ನೆರವೇರಿತ್ತು. ಖ್ಯಾತ ವಜ್ರದ ವ್ಯಾಪಾರಿಯಾಗಿರುವ ಮೆಹ್ತಾ ಅವರ ಪುತ್ರಿಯಾಗಿರುವ ಶ್ಲೋಕಾ ಮೆಹ್ತಾ ಎನ್ಜಿಎ ಒಂದನ್ನ ನಡೆಸ್ತಿದ್ದಾರೆ.

ಉದಯ್ಪುರ್ ನಲ್ಲಿ ಮದುವೆ ನಡೆಸೋದ್ರ ಬಗ್ಗೆ ಅಂಬಾನಿ ಕುಟುಂಬದ ಇನ್ನೂ ಅಂತಿಮ ನಿರ್ಧಾರ ಪ್ರಕಟಿಸಿಲ್ಲ. ಅಂಬಾನಿ ಮಗನ ಮದುವೆ ಉದಯ್ಪುರ್ ನಲ್ಲಿ ನಡೆಯುವ ಸಾಧ್ಯತೆಗಳಿವೆ ಅನ್ನೋ ಸುದ್ದಿ ಓಡಾಡ್ತಿದೆ. ಈ ವಾರದ ಅಂತ್ಯದಲ್ಲಿ ಮದುವೆ ಎಲ್ಲಿ ನಡೆಯಲಿದೆ ಅನ್ನೋದನ್ನ ಅಂಬಾನಿ ಕುಟುಂಬ ಅಂತಿಮಗೊಳಿಸಲಿದೆಯಂತೆ. ಹಾಗಾದ ಪಕ್ಷದಲ್ಲಿ ಉದಯ್ಪುರ್ ಮತ್ತೊಂದು ಐಷಾರಾಮಿ ಮದುವೆಗೆ ಸಾಕ್ಷಿಯಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...