alex Certify
ಕನ್ನಡ ದುನಿಯಾ       Mobile App
       

Kannada Duniya

ಅಂಬಾನಿ ಪುತ್ರಿಯ ಕೈಹಿಡಿಯೊದ್ಯಾರು ಗೊತ್ತಾ…?

ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ, ಯುವ ಉದ್ಯಮಿ ಆನಂದ್ ಪಿರಮಾಲ್ ಅವರನ್ನು ಮದುವೆಯಾಗಲಿದ್ದಾರೆ. ಇನ್ನೂ ಮದುವೆಯ ದಿನಾಂಕವನ್ನು ಘೋಷಿಸಿಲ್ಲ.

ಪಿರಮಾಲ್ ಗ್ರೂಪ್ ನ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ಆನಂದ್ ಪಿರಮಾಲ್, ಈ ಮೊದಲು ಪಿರಮಾಲ್ ಇ ಸ್ವಾಸ್ತ್ಯ ಸ್ಟಾರ್ಟ್ ಅಪ್ ಸ್ಥಾಪಿಸಿದ್ದರು. ಅವರು ಇಂಡಿಯನ್ ಮರ್ಚೆಂಟ್ ಚೇಂಬರ್ ಯುವ ವಿಭಾಗದ ಅಧ್ಯಕ್ಷರಾಗಿದ್ದಾರೆ. ಪೆನ್ಸೇಲ್ವೆನಿಯಾದ ವಿಶ್ವವಿದ್ಯಾಲಯದಿಂದ ಪದವಿಯನ್ನು ಪಡೆದು, ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ ನಲ್ಲಿ ಎಂ.ಬಿ.ಎ. ಓದಿದ್ದಾರೆ.

ಇಶಾ ಅಂಬಾನಿ ರಿಲಯನ್ಸ್ ಬೋರ್ಡ್ ನಲ್ಲಿದ್ದು, ಸೈಕಾಲಜಿಯಲ್ಲಿ ಯಾಲೆ ವಿವಿಯಲ್ಲಿ ಪದವಿ ಪಡೆದಿದ್ದಾರೆ. ಅಲ್ಲದೇ ಎಂ.ಬಿ.ಎ. ಓದಿದ್ದಾರೆ.

ಮಹಾಬಲೇಶ್ವರದ ದೇವಾಲಯದಲ್ಲಿ ಆನಂದ್ ಇಶಾಗೆ ಪ್ರಪೋಸ್ ಮಾಡಿದ್ದರೆಂದು ಹೇಳಲಾಗಿದೆ. ಈ ಸಂದರ್ಭದಲ್ಲಿ ದೇವಾಲಯಕ್ಕೆ ನೀತಾ ಅಂಬಾನಿ, ಮುಕೇಶ್ ಅಂಬಾನಿ, ಕೋಕಿಲಾ ಬೆನ್ ಅಂಬಾನಿ, ಪೂರ್ಣಿಮಾಬೆನ್ ದಲಾಲ್ ಹಾಗೂ ಕುಟುಂಬದವರು ಆಗಮಿಸಿದ್ದರು.

ಮುಕೇಶ್ ಅಂಬಾನಿ ಹಿರಿಯ ಪುತ್ರ ಆಕಾಶ್ ಅಂಬಾನಿ ಅವರು, ಶಾಲಾ ಸಹಪಾಠಿಯಾಗಿದ್ದ ಉದ್ಯಮಿ ಪುತ್ರಿ ಶ್ಲೋಕ ಮೆಹ್ತಾ ಅವರನ್ನು ಡಿಸೆಂಬರ್ ನಲ್ಲಿ ಮದುವೆಯಾಗಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...