alex Certify
ಕನ್ನಡ ದುನಿಯಾ       Mobile App
       

Kannada Duniya

10 ವರ್ಷದಿಂದ ಏರಿಕೆಯಾಗಿಲ್ಲ ಮುಕೇಶ್ ಅಂಬಾನಿ ಸಂಬಳ

ಭಾರತದ ಅತ್ಯಂತ ಶ್ರೀಮಂತ ಉದ್ಯಮಿಗಳಲ್ಲಿ ಮೊದಲಿಗರಾಗಿರುವ ಮುಕೇಶ್ ಅಂಬಾನಿ ಬಹುದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ. ಸತತ 10ನೇ ವರ್ಷವೂ ತಮ್ಮ ಸಂಬಳದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ರಿಲಾಯನ್ಸ್ ಇಂಡಸ್ಟ್ರಿ ಚೇರ್ಮನ್ ಮುಕೇಶ್ ಅಂಬಾನಿಗೆ ಪ್ರತಿ ವರ್ಷ 15 ಕೋಟಿ ಸಂಬಳದ ಪ್ಯಾಕೇಜ್ ಸಿಗ್ತಿದೆ.

ಗುರುವಾರ ಜೂನ್ 7ರಂದು ರಿಲಾಯನ್ಸ್ ಇಂಡಸ್ಟ್ರಿ ಬಿಡುಗಡೆ ಮಾಡಿದ ವಾರ್ಷಿಕ ವರದಿಯಲ್ಲಿ ಇದ್ರ ಬಗ್ಗೆ ವಿವರವಿದೆ. ಮುಕೇಶ್ ಅಂಬಾನಿ ವರ್ಷದ ಪ್ಯಾಕೆಜ್ 15 ಕೋಟಿಯಾಗಿದ್ದು, ಅದ್ರಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲವೆಂದು ತಿಳಿಸಲಾಗಿದೆ. ಜೊತೆಗೆ ಭತ್ಯೆ, ವಿಶೇಷ ಸೌಲಭ್ಯ ಸೇರಿದಂತೆ ಕಮೀಷನ್ ಬಗ್ಗೆಯೂ ವಿವರಿಸಲಾಗಿದೆ.

ಮುಕೇಶ್ ಅಂಬಾನಿ ಒಟ್ಟು ಸಂಪತ್ತು 40.1 ಅರಬ್ ಡಾಲರ್ ಇತ್ತು. 2018ರಲ್ಲಿ ಇದು 16.9 ಬಿಲಿಯನ್ ಡಾಲರ್ ಗೆ ಬಂದು ನಿಂತಿದೆ. ವಿಶ್ವದ ಶ್ರೀಮಂತರ 2,208 ಜನರ ಪಟ್ಟಿಯಲ್ಲಿ ಮುಕೇಶ್ ಅಂಬಾನಿ 19ನೇ ಸ್ಥಾನದಲ್ಲಿದ್ದಾರೆ. ಪೋರ್ಬ್ಸ್ ಬಿಡುಗಡೆ ಮಾಡಿದ ಭಾರತದ 121 ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ಮೊದಲನೆಯವರಾಗಿದ್ದಾರೆ.

ವಿಶ್ವದ ಅತ್ಯಂತ ದುಬಾರಿ ಮನೆಯಲ್ಲಿ ಮುಕೇಶ್ ಅಂಬಾನಿ ನೆಲೆಸಿದ್ದಾರೆ. 27 ಮಹಡಿಗಳ ಐಷಾರಾಮಿ ಮನೆಯಲ್ಲಿ ಅಂಬಾನಿ ನೆಲೆಸಿದ್ದು, ಅವ್ರ ಬಳಿ 168 ಐಷಾರಾಮಿ ವಾಹನಗಳಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...