alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದ ಅತಿ ಶ್ರೀಮಂತ ಮುಕೇಶ್ ಅಂಬಾನಿ ಆಸ್ತಿಯಲ್ಲಿ ಹೆಚ್ಚಳವಾಗಿರೋದೆಷ್ಟು?

ಭಾರತದಲ್ಲಿ ಬಿಲಿಯನೇರ್ ಗಳಿಗೇನೂ ಕಮ್ಮಿಯಿಲ್ಲ. ಸದ್ಯ ಭಾರತದಲ್ಲಿರೋ ಅತ್ಯಂತ ಸಿರಿವಂತರ ಸಂಖ್ಯೆ 121. ಈ ವರ್ಷ 19 ಬಿಲಿಯನೇರ್ ಗಳು ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಅಮೆರಿಕ ಮತ್ತು ಚೀನಾ ಬಿಟ್ರೆ ಅತಿ ಹೆಚ್ಚು ಬಿಲಿಯನೇರ್ ಗಳಿರೋದು ಭಾರತದಲ್ಲಿ.

ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯನ್ನು ಫೋರ್ಬ್ಸ್ ನಿಯತಕಾಲಿಕೆ ಪ್ರಕಟಿಸಿದೆ. ಈ ವರ್ಷ ಕೂಡ ಉದ್ಯಮಿ ಮುಕೇಶ್ ಅಂಬಾನಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ. ಅವರ ಬಳಿಯಿರೋ ಒಟ್ಟಾರೆ ಆಸ್ತಿ 40.1 ಬಿಲಿಯನ್ ಡಾಲರ್.

ವಿಶ್ವದ 2028 ಬಿಲಿಯನೇರ್ ಗಳ ಪೈಕಿ ಮುಕೇಶ್ ಅಂಬಾನಿ 19ನೇ ಸ್ಥಾನದಲ್ಲಿದ್ದಾರೆ. 2017ರಲ್ಲಿ 23.2 ಬಿಲಿಯನ್ ಡಾಲರ್ ಆಸ್ತಿ ಹೊಂದಿದ್ದ ಅಂಬಾನಿ 33ನೇ ಸ್ಥಾನದಲ್ಲಿದ್ರು. ಆದ್ರೀಗ ಅವರ ಆಸ್ತಿ ಮೌಲ್ಯದಲ್ಲಿ 16.9 ಬಿಲಿಯನ್ ಡಾಲರ್ ಹೆಚ್ಚಳವಾಗಿದೆ.

ಫೋರ್ಬ್ಸ್ ಲೆಕ್ಕಾಚಾರದ ಪ್ರಕಾರ ಚೀನಾದಲ್ಲಿ 585 ಹಾಗೂ ಅಮೆರಿಕದಲ್ಲಿ 373 ಬಿಲಿಯನೇರ್ ಗಳಿದ್ದಾರೆ. ಅಮೆಜಾನ್ ಸಿಇಓ ಜೆಫ್ ಬೆಜೋಸ್ ವಿಶ್ವದ ಅತ್ಯಂತ ಶ್ರೀಮಂತ ಎನಿಸಿಕೊಂಡಿದ್ದು, ಅವರ ಬಳಿಯಿರೋ ಆಸ್ತಿಯ ಮೌಲ್ಯ 112 ಬಿಲಿಯನ್ ಡಾಲರ್. 90 ಬಿಲಿಯನ್ ಡಾಲರ್ ಆಸ್ತಿ ಹೊಂದಿರೋ ಬಿಲ್ ಗೇಟ್ಸ್ ಎರಡನೇ ಸ್ಥಾನದಲ್ಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...