alex Certify
ಕನ್ನಡ ದುನಿಯಾ       Mobile App
       

Kannada Duniya

ಇವ್ರೇ ನೋಡಿ ದೇಶದ ಅತಿ ದೊಡ್ಡ ಸಿರಿವಂತ ವ್ಯಕ್ತಿ

Mukesh Ambani India's richest for 9th year, Shanghvi at 2nd spotಫೋರ್ಬ್ಸ್ ಮ್ಯಾಗಜೀನ್, ಭಾರತದ 100 ಮಂದಿ ಅತಿ ದೊಡ್ಡ ಸಿರಿವಂತರ ಪಟ್ಟಿ ಬಿಡುಗಡೆ ಮಾಡಿದ್ದು, ರಿಲಾಯನ್ಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಮುಕೇಶ್ ಅಂಬಾನಿ ಈ ಬಾರಿಯೂ ಪ್ರಥಮ ಸ್ಥಾನದಲ್ಲಿ ನಿಲ್ಲುವ ಮೂಲಕ ಸತತ 9 ನೇ ಬಾರಿಗೆ ದೇಶದ ಅತಿ ದೊಡ್ಡ ಸಿರಿವಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮುಕೇಶ್ ಅಂಬಾನಿಯವರ ಆಸ್ತಿ ಮೌಲ್ಯ 22.7 ಬಿಲಿಯನ್ ಡಾಲರ್ ಗಳಾಗಿದ್ದು, ಎರಡನೇ ಸ್ಥಾನದಲ್ಲಿರುವ ಸನ್ ಫಾರ್ಮಾದ ದಿಲೀಪ್ ಸಾಂಘ್ವಿಯವರ ಆಸ್ತಿ ಮೌಲ್ಯ 16.9 ಬಿಲಿಯನ್ ಡಾಲರ್ ಗಳಾಗಿದೆ. ಮೂರನೇ ಸ್ಥಾನದಲ್ಲಿ ಹಿಂದುಜಾ ಕುಟುಂಬವಿದ್ದು, ಅವರ ಆಸ್ತಿ ಮೌಲ್ಯ 15.2 ಬಿಲಿಯನ್ ಡಾಲರ್ ಗಳಾಗಿದೆ.

15 ಬಿಲಿಯನ್ ಡಾಲರ್ ಆಸ್ತಿ ಮೌಲ್ಯ ಹೊಂದಿರುವ ವಿಪ್ರೋದ ಅಜೀಂ ಪ್ರೇಮ್ ಜಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಪತಂಜಲಿ ಆಯುರ್ವೇದದ ಆಚಾರ್ಯ ಬಾಲಕೃಷ್ಣ 2.5 ಬಿಲಿಯನ್ ಡಾಲರ್ ಆಸ್ತಿಯೊಂದಿಗೆ ಫೋರ್ಬ್ಸ್ ಪಟ್ಟಿಯಲ್ಲಿ 48 ನೇ ಸ್ಥಾನ ಗಳಿಸಿರುವುದು ವಿಶೇಷ. ದೇಶದ ಅತಿ ದೊಡ್ಡ ಸಿರಿವಂತ ವ್ಯಕ್ತಿ ಮುಕೇಶ್ ಅಂಬಾನಿಯವರ ಸಹೋದರ ಅನಿಲ್ ಅಂಬಾನಿ 3.4 ಬಿಲಿಯನ್ ಡಾಲರ್ ಆಸ್ತಿಮೌಲ್ಯದೊಂದಿಗೆ 32 ನೇ ಸ್ಥಾನದಲ್ಲಿದ್ದಾರೆ. ದೇಶದ ನೂರು ಮಂದಿ ಅತಿ ದೊಡ್ಡ ಸಿರಿವಂತರ ಬಳಿಯಿರುವ ಒಟ್ಟು ಆಸ್ತಿ ಮೌಲ್ಯ 381 ಬಿಲಿಯನ್ ಡಾಲರ್ (ಅಂದಾಜು 25.5 ಲಕ್ಷ ಕೋಟಿ ರೂಪಾಯಿಗಳು).

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...