alex Certify
ಕನ್ನಡ ದುನಿಯಾ       Mobile App
       

Kannada Duniya

ರಿಲಾಯನ್ಸ್ ಸಭೆಯಲ್ಲಿ ಗಮನ ಸೆಳೆದ್ರು ಶ್ಲೋಕಾ: ದೊಡ್ಡ ಪರದೆ ಮೇಲೆ ಸಂಜು ಟೀಸರ್

ರಿಲಾಯನ್ಸ್ ಇಂಡಸ್ಟ್ರಿಯ 41ನೇ ವಾರ್ಷಿಕ ಸಭೆ ನಡೆಯುತ್ತಿದೆ. ಸಭೆಯನ್ನು ಆರಂಭಿಸಿದ ಮುಕೇಶ್ ಅಂಬಾನಿ ಕಂಪನಿ ಸಾಧನೆಗಳನ್ನು ಮುಂದಿಟ್ಟರು. ನಂತ್ರ ಆಕಾಶ್ ಅಂಬಾನಿ ಹಾಗೂ ಇಶಾ ಅಂಬಾನಿ ಕಂಪನಿಯ ಮುಂದಿನ ಗುರಿಗಳ ಬಗ್ಗೆ ಹೇಳಿದ್ರು. ಜೊತೆಗೆ ಜಿಯೋ ಮೊಬೈಲ್ ಬಿಡುಗಡೆ ಮಾಡಿದ್ರು.

ಸಭೆಗೆ ಮುಕೇಶ್ ಅಂಬಾನಿ ಕುಟುಂಬದ ಎಲ್ಲ ಸದಸ್ಯರು ಪಾಲ್ಗೊಂಡಿದ್ದರು. ವಿಶೇಷ ಗಮನ ಸೆಳೆದಿದ್ದು ಶ್ಲೋಕಾ ಮೆಹ್ತಾ. ಕುಟುಂಬದ ಕಾರ್ಯಕ್ರಮಗಳಲ್ಲಿ ಮಾತ್ರ ಈವರೆಗೆ ಕಾಣಿಸಿಕೊಂಡಿದ್ದ ಶ್ಲೋಕಾ ಉದ್ಯಮ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಶ್ಲೋಕಾ ಹಾಗೂ ಆಕಾಶ್ ಕೆಲ ದಿನಗಳ ಹಿಂದಷ್ಟೇ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಈ ವರ್ಷಾಂತ್ಯಗೊಳಗೆ ಮದುವೆ ನಡೆಯುವ ಸಾಧ್ಯತೆಯಿದೆ.

ದೇಶದ ಅತ್ಯಂತ ಶ್ರೀಮಂತ ಕುಟುಂಬದ ಸೊಸೆಯಾಗಲಿರುವ ಶ್ಲೋಕಾ ಮದುವೆ ನಂತ್ರ ಮುಕೇಶ್ ಅಂಬಾನಿ ಉದ್ಯಮದಲ್ಲಿ ಕೈ ಜೋಡಿಸುವ ಸಾಧ್ಯತೆಯಿದೆ.

ಇನ್ನು ರಿಲಾಯನ್ಸ್ ಇಂಡಸ್ಟ್ರಿಯ ವಾರ್ಷಿಕ ಸಭೆಯಲ್ಲಿ ‘ಸಂಜು’ ಚಿತ್ರದ ಟೀಸರ್ ಕೂಡ ಗಮನ ಸೆಳೆಯಿತು. ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿರುವ ಚಿತ್ರದ ಟೀಸರನ್ನು ಆಕಾಶ್ ಅಂಬಾನಿ ಹಾಗೂ ಇಶಾ ಅಂಬಾನಿ ದೊಡ್ಡ ಪರದೆ ಮೇಲೆ ತೋರಿಸಿದ್ರು. ಜಿಯೋದ ಹೊಸ ಫಂಕ್ಷನ್ ಪರಿಚಯಿಸುವ ವೇಳೆ ಸಂಜು ಟೀಸರ್ ತೋರಿಸಲಾಯ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...