alex Certify
ಕನ್ನಡ ದುನಿಯಾ       Mobile App
       

Kannada Duniya

ಏಷ್ಯಾದಲ್ಲಿಯೇ ಅತ್ಯಂತ ಶ್ರೀಮಂತ ಮುಕೇಶ್ ಅಂಬಾನಿ

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಭಾರತದ ನಂತ್ರ ಏಷ್ಯಾದಲ್ಲಿಯೇ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಫೋರ್ಬ್ಸ್ ಬಿಡುಗಡೆ ಮಾಡಿದ ರಿಯಲ್ ಟೈಂ ಬಿಲಿಯನಿಯರ್ ಪಟ್ಟಿಯಲ್ಲಿ 4210 ಕೋಟಿ ಡಾಲರ್ ( 2.82 ಲಕ್ಷ ಕೋಟಿ) ಆಸ್ತಿಯೊಂದಿಗೆ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ಮೊದಲ ಸ್ಥಾನದಲ್ಲಿದ್ದಾರೆ.

ಚೀನಾದ ಎವರ್ಗ್ರ್ಯಾಂಡೆ ಗ್ರೂಪ್ ಮಾಲೀಕ ಹುವಾಯಿ ಯುನ್ ರನ್ನು ಹಿಂದಿಕ್ಕಿರುವ ಮುಕೇಶ್ ಅಂಬಾನಿ ಏಷ್ಯಾದ ನಂಬರ್ 1 ಶ್ರೀಮಂತ ಎನ್ನಿಸಿಕೊಂಡಿದ್ದಾರೆ. ಹುವಾಯಿ ಆಸ್ತಿ 2.63 ಲಕ್ಷ ಕೋಟಿಯಿದೆ. ಫೋರ್ಬ್ಸ್ ಬಿಡುಗಡೆ ಮಾಡಿದ ಗ್ಲೋಬಲ್ ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿ 14ನೇ ಸ್ಥಾನದಲ್ಲಿದ್ದಾರೆ. ಬುಧವಾರ ಷೇರು ಮಾರುಕಟ್ಟೆಯಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್ ಷೇರುಗಳು 1.22ರಷ್ಟು ಏರಿಕೆಯಾಗಿ ಅಂಬಾನಿ ವೈಯಕ್ತಿಕ ಸಂಪತ್ತು 466 ಮಿಲಿಯನ್ ಏರಿಕೆಯಾಗಲು ಕಾರಣವಾಗಿದೆ.

2017ರಲ್ಲಿ ಮುಕೇಶ್ ಅಂಬಾನಿ ಸಂಪತ್ತಿನಲ್ಲಿ ಭಾರೀ ಏರಿಕೆಯಾಗಿದೆ. ಮುಕೇಶ್ ಅಂಬಾನಿಯ ರಿಲಾಯನ್ಸ್ ಇಂಡಸ್ಟ್ರಿ ಷೇರುಗಳಲ್ಲಿ ಈ ವರ್ಷ ಶೇಕಡಾ 75ರಷ್ಟು ಏರಿಕೆಯಾಗಿರುವುದೇ ಇದಕ್ಕೆ ಕಾರಣವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...