alex Certify
ಕನ್ನಡ ದುನಿಯಾ       Mobile App
       

Kannada Duniya

ಆಲಿಬಾಬಾ ಅಧ್ಯಕ್ಷರನ್ನು ಹಿಂದಿಕ್ಕಿದ ಮುಕೇಶ್ ಅಂಬಾನಿ

ರಿಲಯನ್ಸ್ ಇಂಡಸ್ಟ್ರೀಸ್ ನ ಮುಕೇಶ್ ಅಂಬಾನಿ ಮತ್ತೊಂದು ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಏಷ್ಯಾದ ಸಿರಿವಂತರ ಪಟ್ಟಿಯಲ್ಲಿ ಮುಕೇಶ್ ಅಗ್ರಗಣ್ಯರಾಗಿ ಹೊರಹೊಮ್ಮಿದ್ದಾರೆ.

ಭಾರತದ ಇ – ಕಾಮರ್ಸ್ ವಲಯದಲ್ಲಿ ರಿಲಯನ್ಸ್ ಸಂಚಲನ ಮೂಡಿಸಿದ ಪರಿಣಾಮ ಏಷ್ಯಾದ ನಂಬರ್ 1 ಶ್ರೀಮಂತರಾಗಿ ಮುಕೇಶ್ ಹೊರಹೊಮ್ಮಿದ್ದಾರೆ. ಬ್ಲೂಮ್ ಬರ್ಗ್ ಮಿಲೇನಿಯಮ್ ನೀಡಿರುವ ಏಷ್ಯಾದ ಸಿರಿವಂತರ ಪಟ್ಟಿಯಲ್ಲಿ ಮುಕೇಶ್ 44.3 ಶತಕೋಟಿ ಆಸ್ತಿ ಅಂದ್ರೆ ಅಂದಾಜು 3 ಲಕ್ಷ ಕೋಟಿ ರೂಪಾಯಿಯೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.

ಇದರೊಂದಿಗೆ ಮುಕೇಶ್ ಅಂಬಾನಿ ಚೀನಾದ ಅಲಿಬಾಬಾ ಗ್ರೂಪ್ ನ ಅಧ್ಯಕ್ಷ ಜಾಕ್ ಮಾ ಅವರನ್ನ ಹಿಂದಿಕ್ಕಿದ್ದಾರೆ. ಜಾಕ್ ಮಾ ಅವರ ಅಲಿಬಾಬಾ ಗ್ರೂಪ್ 1.4 ಶತಕೋಟಿ ಡಾಲರ್ ನಷ್ಟು ಅನುಭವಿಸಿದ ಹಿನ್ನಲೆಯಲ್ಲಿ ಏಷ್ಯಾದ ಸಿರಿವಂತರ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ.

ಈ ಪಟ್ಟಿ ಪ್ರಕಟವಾದ ಬಳಿಕ ರಿಲಯನ್ಸ್ ಷೇರುಗಳಲ್ಲೂ ಧನಾತ್ಮಕ ಬದಲಾವಣೆಗಳಾಗಿವೆ. ರಿಲಯನ್ಸ್ ಇಂಡಸ್ಟ್ರೀಸ್ ನ ಷೇರುಗಳಲ್ಲಿ ಶೇಕಡಾ 1.7 ರಷ್ಟು ಬೆಳವಣಿಗೆ ಕಂಡುಬಂದಿದೆ. ಈ ಬಾರಿ ರಿಲಯನ್ಸ್ ಪೆಟ್ರೋ ಕೆಮಿಕಲ್ಸ್ ಸಾಮರ್ಥ್ಯ ದುಪ್ಪಟ್ಟಾಗಿದ್ದರಿಂದ ಅಂಬಾನಿಯವರ ಆಸ್ತಿ ಮೌಲ್ಯಕ್ಕೆ 27 ಸಾವಿರ ಕೋಟಿ ರುಪಾಯಿ ಹರಿದು ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...