alex Certify
ಕನ್ನಡ ದುನಿಯಾ       Mobile App
       

Kannada Duniya

ಪುಟ್ಟ ದೇಶಗಳನ್ನು ಮೀರಿಸಿದೆ ಮುಕೇಶ್ ಅಂಬಾನಿ ಆಸ್ತಿ

ambani

ರಿಲಯೆನ್ಸ್ ಇಂಡಸ್ಟ್ರೀಸ್ ನ ಮುಕೇಶ್ ಅಂಬಾನಿ ಭಾರತದ ಅತ್ಯಂತ ಶ್ರೀಮಂತ ಉದ್ಯಮಿ ಅನ್ನೋದು ಎಲ್ರಿಗೂ ಗೊತ್ತು. ಫೋರ್ಬ್ಸ್ ಮ್ಯಾಗಝೀನ್ ನೀಡಿರೋ ಮಾಹಿತಿ ಪ್ರಕಾರ ಅಂಬಾನಿ ಅವರ ಆಸ್ತಿ, ಪೂರ್ವ ಯುರೋಪ್ ರಾಷ್ಟ್ರ ಎಸ್ಟೋನಿಯಾದ ಒಟ್ಟಾರೆ ಜಿಡಿಪಿಗಿಂತಲೂ ಅಧಿಕವಂತೆ. ಒಟ್ಟಾರೆ 22.7 ಬಿಲಿಯನ್ ಡಾಲರ್ ಆಸ್ತಿ ಹೊಂದಿರುವ ಮುಕೇಶ್ ಅಂಬಾನಿ ಹಲವು ಸಣ್ಣ ಪುಟ್ಟ ದೇಶಗಳನ್ನು ಮೀರಿಸಿದ್ದಾರೆ.

ಭಾರತದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿರುವ ವಿಪ್ರೋದ ಅಜೀಂ ಪ್ರೇಮ್ ಜಿ ಕೂಡ ಚಿಕ್ಕ ಪುಟ್ಟ ರಾಷ್ಟ್ರಗಳನ್ನೆಲ್ಲ ಹಿಂದಿಕ್ಕಿದ್ದಾರೆ. ಅಜೀಂ ಪ್ರೇಮ್ ಜಿ ಅವರ ಒಟ್ಟು ಆಸ್ತಿಯ ಮೌಲ್ಯ 15 ಬಿಲಿಯಲ್ ಡಾಲರ್. ಇದು ಆಫ್ರಿಕಾ ರಾಷ್ಟ್ರವಾದ ಮೊಝಾಂಬಿಕ್ ನ ಒಟ್ಟಾರೆ ಜಿಡಿಪಿಗಿಂತಲೂ ಹೆಚ್ಚಾಗಿದೆ.

ಸನ್ ಫಾರ್ಮಾದ ದಿಲೀಪ್ ಸಾಂಘ್ವಿ, 16.9 ಬಿಲಿಯನ್ ಡಾಲರ್ ಆಸ್ತಿ ಹೊಂದಿದ್ದು ಸಿರಿವಂತರ ಪಟ್ಟಿಯಲ್ಲಿ ಎರಡನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಹಿಂದೂಜಾ ಗ್ರೂಪ್ ಮಾಲೀಕರಾದ ಹಿಂದೂಜಾ ಫ್ಯಾಮಿಲಿ 15.2 ಬಿಲಿಯನ್ ಡಾಲರ್ ಆಸ್ತಿ ಹೊಂದಿದ್ದು, ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. 13.90 ಬಿಲಿಯನ್ ಡಾಲರ್ ಆಸ್ತಿಗೆ ಒಡೆಯರಾಗಿರುವ ಪಲ್ಲೊಂಜಿ ಮಿಸ್ತ್ರಿ 5 ನೇ ಸ್ಥಾನ ಪಡೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...