alex Certify
ಕನ್ನಡ ದುನಿಯಾ       Mobile App
       

Kannada Duniya

ಅಂಬಾನಿ ಕುಟುಂಬದ ಲೈಫ್ ಸ್ಟೈಲ್ ನೋಡಿದ್ರೆ ಬೆರಗಾಗ್ತಿರಿ

ದೇಶದ ಸಿರಿವಂತ ಉದ್ಯಮಿ ಮುಕೇಶ್ ಅಂಬಾನಿ ಈಗ ಏಷ್ಯಾದ ಅತಿ ಸಿರಿವಂತ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಮುಕೇಶ್ ಅಂಬಾನಿಯವರ ಆಸ್ತಿಯಲ್ಲಿ ದಿನೇ ದಿನೇ ಹೆಚ್ಚಳವಾಗುತ್ತಿದ್ದು, ವಿಶ್ವದ ಅತಿ ಶ್ರೀಮಂತರ ಪಟ್ಟಿಯಲ್ಲೂ ಇವರ ಹೆಸರಿದೆ.

ಅಂಬಾನಿ ಕುಟುಂಬದ ಲೈಫ್ ಸ್ಟೈಲ್ ಕುರಿತು ಹಲವು ವದಂತಿಗಳು ಕೇಳಿ ಬರುತ್ತವೆ. ಮುಕೇಶ್ ಅಂಬಾನಿಯವರ ಪತ್ನಿ ನೀತಾ ಅಂಬಾನಿ ಕುಡಿಯುವ ಟೀ ಬೆಲೆಯೇ ಲಕ್ಷ ರೂಪಾಯಿಗಳೆಂದು ಹೇಳಲಾಗಿದೆ. ಮುಕೇಶ್ ಅಂಬಾನಿ ಕುಟುಂಬ ವಾಸವಾಗಿರುವ ‘ಅಂಟಿಲ್ಲಾ’ ನಿವಾಸ ವಿಶ್ವದ ಎರಡನೇ ದುಬಾರಿ ಮನೆಯೆಂಬ ಹೆಗ್ಗಳಿಕೆ ಹೊಂದಿದೆ.

ಸಾಮಾಜಿಕ ಜಾಲತಾಣದಲ್ಲಿ ಅಂಬಾನಿ ಕುಟುಂಬದ ಪ್ರವಾಸದ ವಿಡಿಯೋ ಒಂದು ಹರಿದಾಡುತ್ತಿದ್ದು, ಇದರಲ್ಲಿ ಅವರುಗಳು ಲಕ್ಸುರಿ ಜೀವನದ ಚಿತ್ರಣ ಸೆರೆಯಾಗಿದೆ. ದೇವರ ದರ್ಶನಕ್ಕೆ ಮುಕೇಶ್ ಅಂಬಾನಿ ಕುಟುಂಬ ತೆರಳಿದ ವೇಳೆ ಈ ವಿಡಿಯೋ ತೆಗೆಯಲಾಗಿದ್ದು, ಎರಡು ಹೆಲಿಕಾಪ್ಟರ್ ಗಳಲ್ಲಿ ಕುಟುಂಬ ಸದಸ್ಯರು ಬಂದಿಳಿದಿದ್ದಾರೆ.

ಸ್ಥಳದಲ್ಲಿ ಭಾರೀ ಸೆಕ್ಯುರಿಟಿ ಏರ್ಪಡಿಸಲಾಗಿದ್ದು, ತಮಗಾಗಿ ಕಾದು ನಿಂತಿದ್ದ ಗುಂಡು ನಿರೋಧಕ ಲಕ್ಸುರಿ ಕಾರ್ ನಲ್ಲಿ ಮುಕೇಶ್ ಅಂಬಾನಿ ಮತ್ತವರ ಕುಟುಂಬ ಸದಸ್ಯರು ದೇವಾಲಯಕ್ಕೆ ತೆರಳಿ ದೇವರ ದರ್ಶನ ಪಡೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...