alex Certify
ಕನ್ನಡ ದುನಿಯಾ       Mobile App
       

Kannada Duniya

MTNL ಗ್ರಾಹಕರಿಗೆ ಸಿಗ್ತಿದೆ ಮೂರು ಪಟ್ಟು ಅಧಿಕ ಡೇಟಾ

mtnl_01

MTNL ತನ್ನ ಪ್ರಿಪೇಯ್ಡ್ ಗ್ರಾಹಕರಿಗೆ ಭರ್ಜರಿ ಕೊಡುಗೆ ನೀಡಿದೆ. 3ಜಿ ಡೇಟಾವನ್ನು ಮೂರು ಪಟ್ಟು ಹೆಚ್ಚಿಸಿದೆ. ಆದ್ರೆ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಗ್ರಾಹಕರು 99 ರೂಪಾಯಿ ರೀಚಾರ್ಜ್ ಮಾಡಿಸಿಕೊಂಡ್ರೆ ಈ ಮೊದಲು 500 ಎಂಬಿ ಡೇಟಾ ದೊರೆಯುತ್ತಿತ್ತು. ಇನ್ಮೇಲೆ 1.5 ಜಿಬಿ 3ಜಿ ಡೇಟಾ ದೊರೆಯಲಿದೆ.

30 ದಿನಗಳ ವ್ಯಾಲಿಡಿಟಿ ಇರುತ್ತದೆ. 19 ರೂ. ಕೂಪನ್ ಗೆ 750 ಎಂಬಿ ಡೇಟಾ ದೊರೆಯುತ್ತದೆ. ಆಗಸ್ಟ್ 7ರಿಂದ ಅನ್ವಯವಾಗುವಂತೆ ಹೊಸ ಕೊಡುಗೆಯನ್ನು ಎಂ ಟಿ ಎನ್ ಎಲ್ ಬಿಡುಗಡೆ ಮಾಡಿದೆ. 319 ರೂಪಾಯಿ ರೀಚಾರ್ಜ್ ಮಾಡಿಕೊಳ್ಳುವ ಗ್ರಾಹಕರಿಗೆ ಪ್ರತಿದಿನ 2ಜಿಬಿ 2ಜಿ ಅಥವಾ 3ಜಿ ಡೇಟಾ ದೊರೆಯಲಿದೆ.

2000ನೇ ಇಸ್ವಿಯ ಆರಂಭದಲ್ಲಿ ಕಾರ್ಯಾರಂಭ ಮಾಡಿದ್ದ ಎಂಟಿಎನ್ ಎಲ್ 2009-10ರಿಂದ್ಲೂ ಭಾರೀ ನಷ್ಟ ಅನುಭವಿಸುತ್ತಿದೆ. ಮೊಬೈಲ್ ಏರ್ ವೇವ್ಸ್ ಗೆ 11,000 ಕೋಟಿ ರೂ. ಕಟ್ಟಬೇಕಾಗಿ ಬಂದಿದ್ದರಿಂದ ನಷ್ಟದ ಸುಳಿಗೆ ಸಿಲುಕಿದೆ. ಉದ್ಯೋಗಿಗಳ ವೇತನ ಹೆಚ್ಚಳದ ಹೊರೆಯೂ ಸೇರಿ ಸುಮಾರು 15,000 ಕೋಟಿ ನಷ್ಟ ಅನುಭವಿಸಿದೆ.

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...