alex Certify
ಕನ್ನಡ ದುನಿಯಾ       Mobile App
       

Kannada Duniya

ಆರ್.ಬಿ.ಐ. ನಿಂದ ಆಗಿದೆ ಲೋಪ

2000-not

ಭೋಪಾಲ್: ಹೊಸ 2000 ರೂ. ಮುಖಬೆಲೆಯ ನೋಟ್ ಮುದ್ರಣದಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್(ಆರ್.ಬಿ.ಐ.) ಮಹಾ ಲೋಪ ಎಸಗಿದೆ.

ಮಹಾತ್ಮ ಗಾಂಧೀಜಿ ಭಾವಚಿತ್ರವಿಲ್ಲದೇ, 2000 ರೂ. ನೋಟ್ ಗಳನ್ನು ಮುದ್ರಿಸಿ ಚಲಾವಣೆಗೆ ಬಿಡಲಾಗಿದೆ. ಮಧ್ಯಪ್ರದೇಶದ ಶೆಯೋಪುರ್ ಜಿಲ್ಲೆಯ ಹಲವು ಬ್ಯಾಂಕ್ ಗಳಲ್ಲಿ ಹೀಗೆ ಮುದ್ರಣ ದೋಷ ಇರುವ ನೋಟ್ ಗಳು ಕಂಡು ಬಂದಿವೆ.

ಬ್ಯಾಂಕ್ ಒಂದರಲ್ಲಿ ಹೊಸ 2000 ರೂ. ನೋಟ್ ಪಡೆದುಕೊಂಡ ಬಿಚ್ಚುಗಾವಡಿ ಗ್ರಾಮದ ರೈತ ಕೃಷ್ಣ ಮೀನಾ ಅವರಿಗೆ ಅಚ್ಚರಿ ಕಾದಿತ್ತು.

ಅವರಿಗೆ ನೀಡಲಾದ ನೋಟುಗಳಲ್ಲಿ ಗಾಂಧಿ ಭಾವಚಿತ್ರವೇ ಇರಲಿಲ್ಲ. ಇದು ನಕಲಿ ನೋಟ್ ಎಂದು ಭಾವಿಸಿದ ಕೃಷ್ಣ, ಅದನ್ನು ಬ್ಯಾಂಕ್ ಗೆ ವಾಪಸ್ ಕೊಟ್ಟಿದ್ದಾರೆ.

ಆದರೆ, ಬ್ಯಾಂಕ್ ಅಧಿಕಾರಿಗಳು ಇವು ನಕಲಿ ನೋಟ್ ಅಲ್ಲ, ಅಸಲಿ ನೋಟುಗಳೇ ಆಗಿದ್ದು, ಮುದ್ರಣ ದೋಷದಿಂದಾಗಿ ಗಾಂಧಿ ಚಿತ್ರ ಮೂಡಿ ಬಂದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಹಲವಾರು ಮಂದಿಯ ಬಳಿ ಇಂತಹ ನೋಟುಗಳು ಕಂಡು ಬಂದಿದ್ದು, ಅವರೆಲ್ಲಾ ವಾಪಸ್ ಮಾಡಲು ಮುಂದಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ವಿಐಪಿ ಕಾರ್ ಮೇಲಿನ ಕೆಂಪು ದೀಪ ತೆರವುಗೊಳಿಸಿದರೆ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಸಿಗಲಿದೆಯೇ..?

    View Results

    Loading ... Loading ...