alex Certify
ಕನ್ನಡ ದುನಿಯಾ       Mobile App
       

Kannada Duniya

5,000 mAh ಬ್ಯಾಟರಿ ಜೊತೆ ಬಿಡುಗಡೆಯಾಯ್ತು ಮೊಟೋ ಇ5 ಪ್ಲಸ್

ಮೊಟೋರೊಲಾ ಭಾರತದಲ್ಲಿ ಬಜೆಟ್ ಸ್ಮಾರ್ಟ್ಫೋನ್ ಮೊಟೊ ಇ5 ಬಿಡುಗಡೆ ಮಾಡಿದೆ. ಇದ್ರ ಮತ್ತೊಂದು ರೂಪಾಂತರ ಮೊಟೊ ಇ5 ಪ್ಲಸ್ ಕೂಡ ಬಿಡುಗಡೆಯಾಗಿದೆ. ಈ ಸ್ಮಾರ್ಟ್ಫೋನ್ ಬೆಲೆ 11,999 ರೂಪಾಯಿ.

ಮೊಟೋ ಇ5 ಪ್ಲಸ್ ಸ್ಮಾರ್ಟ್ಫೋನನ್ನು ಅಮೆಜಾನ್ ಇಂಡಿಯಾದಲ್ಲಿ ಗ್ರಾಹಕರು ಖರೀದಿ ಮಾಡಬಹುದಾಗಿದೆ. ಮತ್ತೊಂದು ಸ್ಮಾರ್ಟ್ಫೋನ್ ಮೊಟೋ ಇ ಸ್ಮಾರ್ಟ್ಫೋನ್ ಬೆಲೆ 9,999 ರೂಪಾಯಿ. ಇದನ್ನು ಮೊಟೋ ಹಬ್ ನಲ್ಲಿ ಖರೀದಿ ಮಾಡಬಹುದಾಗಿದೆ. ಏಪ್ರಿಲ್ ನಲ್ಲಿಯೇ ಈ ಸ್ಮಾರ್ಟ್ಫೋನ್ ಬಿಡುಗಡೆಯಾಗಿದೆ. ಆದ್ರೆ ಭಾರತದ ಮಾರುಕಟ್ಟೆಗೆ ಈಗ ಪ್ರವೇಶ ಮಾಡಿದೆ.

ಮೊಟೋ ಇ5 ಸ್ಮಾರ್ಟ್ಫೋನ್ ಮಾರಾಟ ಜುಲೈ 10 ರ ರಾತ್ರಿ 12 ಗಂಟೆಯಿಂದ ಶುರುವಾಗಿದೆ. ಜುಲೈ 11 ಹಾಗೂ ಜುಲೈ 12 ರಂದು ಗ್ರಾಹಕರು ಎಸ್ಬಿಐ ಕಾರ್ಡ್ ನಲ್ಲಿ ಮೊಬೈಲ್ ಖರೀದಿ ಮಾಡಿದ್ರೆ 800 ರೂಪಾಯಿ ರಿಯಾಯಿತಿ ಸಿಗಲಿದೆ. 6 ಇಂಚಿನ ಹೆಚ್ ಡಿ ಪ್ಲಸ್ ಐಪಿಎಸ್ ಎಲ್ ಸಿ ಡಿ ಡಿಸ್ಪ್ಲೇ ನೀಡಲಾಗಿದೆ. 2 ಜಿಬಿ ರ್ಯಾಮ್ ಹಾಗೂ 16 ಜಿಬಿ ಇಂಟರ್ನಲ್ ಮೆಮೊರಿಯನ್ನು ಇದು ಹೊಂದಿದೆ. 13 ಮೆಗಾಪಿಕ್ಸಲ್ ರಿಯಲ್ ಕ್ಯಾಮರಾ ಹಾಗೂ 5 ಮೆಗಾಪಿಕ್ಸಲ್ ಸೆಲ್ಫಿ ಕ್ಯಾಮರಾ ನೀಡಲಾಗಿದೆ.

ಇನ್ನುಮೊಟೋ ಇ5 ಪ್ಲಸ್ ಮೊಬೈಲ್ 6 ಇಂಚಿನ ಹೆಚ್ ಡಿ ಡಿಸ್ಪ್ಲೇ ಹೊಂದಿದೆ. 3 ಜಿಬಿ ರ್ಯಾಮ್ ಜೊತೆ 32 ಜಿಬಿ ಇಂಟರ್ನಲ್ ಮೆಮೊರಿಯನ್ನು ಇದು ಹೊಂದಿದೆ. 12 ಮೆಗಾಪಿಕ್ಸಲ್ ರಿಯಲ್ ಕ್ಯಾಮರಾ ಹಾಗೂ 5 ಮೆಗಾಪಿಕ್ಸಲ್ ಸೆಲ್ಪಿ ಕ್ಯಾಮರಾ ನೀಡಲಾಗಿದೆ. ಇದ್ರ ಬ್ಯಾಟರಿ ತುಂಬಾ ಪವರ್ ಫುಲ್ ಆಗಿರಲಿದೆ. ಕಂಪನಿ 5,000mAh ಬ್ಯಾಟರಿಯನ್ನು ನೀಡ್ತಿದೆ. 15 ನಿಮಿಷ ಚಾರ್ಜ್ ಮಾಡಿ 6 ಗಂಟೆಯವರೆಗೆ ಬಳಸಬಹುದೆಂದು ಕಂಪನಿ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...