alex Certify
ಕನ್ನಡ ದುನಿಯಾ       Mobile App
       

Kannada Duniya

ಕಡಿಮೆ ಬೆಲೆಗೆ ಬಿಡುಗಡೆಯಾಯ್ತು ಮೋಟೋ ಎ4 ಪ್ಲಸ್

moto-e4-plus-phone

ಮೋಟೊ ಎ4 ಪ್ಲಸ್ ಭಾರತದಲ್ಲಿ ಬಿಡುಗಡೆಯಾಗಿದೆ. 5000 mAh ಬ್ಯಾಟರಿಯ ಈ ಸ್ಮಾರ್ಟ್ ಫೋನ್ ಬೆಲೆ 9999 ರೂಪಾಯಿ. ಇಂದು ರಾತ್ರಿ 11.59 ರ ನಂತ್ರ ಫ್ಲಿಪ್ಕಾರ್ಟ್ ನಲ್ಲಿ ಮಾರಾಟ ಶುರುವಾಗಲಿದೆ. ಇದ್ರ ಜೊತೆಗೆ ಕಂಪನಿ ಕೆಲವೊಂದು ಆಫರ್ ನೀಡಿದೆ.

ಮೋಟೋ ಎ4 ಪ್ಲಸ್ ಮೊಬೈಲ್ ಖರೀದಿ ಮಾಡುವ ಗ್ರಾಹಕರು 649 ರೂಪಾಯಿಗೆ ಮೋಟೋ ಪ್ಲಸ್ 2 ಇಯರ್ ಫೋನ್ ಖರೀದಿ ಮಾಡಬಹುದಾಗಿದೆ. ಜೊತೆಗೆ ಎರಡು ತಿಂಗಳ ಹಾಟ್ಸ್ಟಾರ್ ಪ್ರೀಮಿಯಂ ಸೌಲಭ್ಯ ಸಿಗಲಿದೆ. ಇನ್ನು ಮೊಬೈಲ್ ಖರೀದಿ ಗ್ರಾಹಕರು ವೋಡಾಫೋನ್ ಗ್ರಾಹಕರಾಗಿದ್ದರೆ ಮೂರು ತಿಂಗಳು 443 ರೂಪಾಯಿಗೆ 84 ಜಿಬಿ ಡೇಟಾ ಸಿಗಲಿದೆ. ರಿಲಾಯನ್ಸ್ ಜಿಯೋ ಪ್ರೈಂ ಸದಸ್ಯರಿಗೆ 30 ಜಿಬಿ ಪ್ರತ್ಯೇಕ ಡೇಟಾ ಸಿಗಲಿದೆ.

ಗ್ರಾಹಕರು 9000 ರೂಪಾಯಿಗೆ ಎಕ್ಸ್ ಚೇಂಜ್ ಹಾಗೂ 4 ಸಾವಿರ ರೂಪಾಯಿಯ ಬೈ ಬ್ಯಾಕ್ ಗ್ಯಾರಂಟಿ ಲಾಭವನ್ನು ಕೂಡ ಪಡೆಯಬಹುದಾಗಿದೆ. ಹಿಂದಿನ ತಿಂಗಳು ಮೋಟೋ ಇ4 ಜೊತೆ ಮೋಟೋ ಎ4 ಪ್ಲಸ್ ವಿದೇಶಗಳಲ್ಲಿ ಬಿಡುಗಡೆಯಾಗಿತ್ತು. ಫುಲ್ ಚಾರ್ಜ್ ಮಾಡಿದ್ರೆ ಎರಡು ದಿನ ಬಳಸಬಹುದೆಂದು ಕಂಪನಿ ಹೇಳಿದೆ. ಭಾರತದಲ್ಲಿ ಮೋಟೋ ಇ4 ಬೆಲೆ 8999 ರೂಪಾಯಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...