alex Certify
ಕನ್ನಡ ದುನಿಯಾ       Mobile App
       

Kannada Duniya

ಭರ್ಜರಿ ರಿಯಾಯಿತಿ ಬೆಲೆಯಲ್ಲಿ ಸಿಗ್ತಿದೆ ಮೊಟೊ ಸ್ಮಾರ್ಟ್ಫೋನ್

ಮೊಟೊರೊಲಾ ಭಾರತದಲ್ಲಿ ನಾಲ್ಕು ಸ್ಮಾರ್ಟ್ಫೋನ್ ಗಳ ಮೇಲೆ ಭರ್ಜರಿ ರಿಯಾಯಿತಿ ನೀಡ್ತಿದೆ. ಈ ರಿಯಾಯಿತಿ ಮೊಟೊ ಫೆಸ್ಟ್ ನಲ್ಲಿ ಗ್ರಾಹಕರಿಗೆ ಸಿಗ್ತಿದೆ. ಈ ಆಫರ್ ನಲ್ಲಿ ಮೊಟೊ ಇ4 ಪ್ಲಸ್, ಮೊಟೊ ಎಕ್ಸ್ 4, ಮೊಟೊ ಜಿ5ಎಸ್ ಪ್ಲಸ್ ಮತ್ತು ಮೊಟೊ ಝೆಡ್ 2 ಪ್ಲೇ ಮೇಲೆ ಸಿಗ್ತಿದೆ.

ಈ ಸೇಲ್ ಗುರುವಾರ ಮಾರ್ಚ್ 29ರವರೆಗೆ ನಡೆಯಲಿದೆ. ಸೇಲ್ ನಲ್ಲಿ ಈ ನಾಲ್ಕು ಸ್ಮಾರ್ಟ್ಫೋನ್ ಮೇಲೆ 6 ಸಾವಿರದವರೆಗೆ ರಿಯಾಯಿತಿ ಸಿಗ್ತಿದೆ. ಅಮೆಜಾನ್, ಫ್ಲಿಪ್ಕಾರ್ಟ್, ಮೊಬೈಲ್ ಮಳಿಗೆಗಳಲ್ಲಿ ಈ ಫೋನ್ ಗಳನ್ನು ಗ್ರಾಹಕರು ಖರೀದಿ ಮಾಡಬಹುದಾಗಿದೆ.

ಮೊಟೊ ಫೆಸ್ಟ್ ಪ್ರಯುಕ್ತ ಮೊಟೊ ಇ4 ಪ್ಲಸ್ 9,999 ರೂಪಾಯಿ ಬದಲು 9,499 ರೂಪಾಯಿಗೆ ಸಿಗ್ತಿದೆ. ಮೊಟೊ ಎಕ್ಸ್ 4 3ಜಿಬಿ ರ್ಯಾಮ್ ಫೋನ್ ಮೇಲೆ 3 ಸಾವಿರ ರೂಪಾಯಿ ವಿನಿಮಯ ರಿಯಾಯಿತಿ ನೀಡಲಾಗಿದೆ. ಗ್ರಾಹಕರು ಫ್ಲಿಪ್ಕಾರ್ಟ್ ನಲ್ಲಿ ಈ ಫೋನನ್ನು 20,999 ರೂಪಾಯಿಗೆ ಖರೀದಿ ಮಾಡಲು ಅವಕಾಶವಿದೆ.

ಮೊಟೊ ಝೆಡ್ 2 ಪ್ಲೇ ಮೇಲೆ 6 ಸಾವಿರ ರೂಪಾಯಿ ರಿಯಾಯಿತಿ ಸಿಗ್ತಿದೆ. ಗ್ರಾಹಕರು ಮೊಟೊ ಫೆಸ್ಟ್ ಸೇಲ್ ನಲ್ಲಿ ಈ ಫೋನನ್ನು 21,999 ರೂಪಾಯಿಗೆ ಖರೀದಿ ಮಾಡಬಹುದಾಗಿದೆ. ಮೊಟೊ ಜಿ5ಎಸ್ ಮೇಲೆ 4 ಸಾವಿರ ರೂಪಾಯಿ ರಿಯಾಯಿತಿ ನೀಡಲಾಗಿದ್ದು, ಫೋನ್ 16,999 ರೂಪಾಯಿ ಬದಲು 12,999 ರೂಪಾಯಿಗೆ ಸಿಗಲಿದೆ.

 

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...