alex Certify
ಕನ್ನಡ ದುನಿಯಾ       Mobile App
       

Kannada Duniya

‘ಸಮೀಕ್ಷೆ’ಯಲ್ಲಿ ಬಹಿರಂಗವಾಗಿದೆ ಪ್ರವಾಸದ ಕುರಿತ ಕುತೂಹಲಕಾರಿ ಸಂಗತಿ

ಎಕ್ಸ್ಪೀಡಿಯಾದ ಪರವಾಗಿ ಆಕ್ಸೆಸ್ ಮೀಡಿಯಾ ಇಂಟರ್ನ್ಯಾಷನಲ್ ನಡೆಸಿದ ಆನ್ಲೈನ್ ಸಮೀಕ್ಷೆಯಲ್ಲಿ ವಿಚಿತ್ರವಾದ ಫಲಿತಾಂಶ ಹೊರಬಿದ್ದಿದೆ. ಸಮೀಕ್ಷೆಯ ಪ್ರಕಾರ ಶೇಕಡಾ 42 ರಷ್ಟು ಭಾರತೀಯರು 6-10 ಗಂಟೆಗಳ ಕಾಲ ವಾರಾಂತ್ಯದಲ್ಲಿ ಎಲ್ಲಿಗೆ ಪ್ರವಾಸ ಹೋಗಬೇಕು, ಯಾವ ಹೊಟೇಲ್ ಬುಕ್ ಮಾಡಬೇಕು, ಪ್ರವಾಸಕ್ಕೆ ಲಭ್ಯವಿರುವ ಬೆಸ್ಟ್ ಆಫರ್ ಗಳೇನು ಅನ್ನೋದನ್ನ ತಿಳಿದುಕೊಳ್ಳೋದ್ರಲ್ಲಿ ಕಳೀತಾರಂತೆ.

ಇಷ್ಟೇ ಅಲ್ಲ ಶೇಕಡಾ 23 ರಷ್ಟು ಭಾರತೀಯರು 11.30 ನಿಮಿಷ, ಶೇಕಡಾ 20ರಷ್ಟು ಭಾರತೀಯರು 30 ಗಂಟೆಗಳ ಕಾಲಹರಣವನ್ನು ವಾರಾಂತ್ಯದ ಲಾಂಗ್ ಟ್ರಿಪ್ ಪ್ಲಾನ್ ಮಾಡೋದ್ರಲ್ಲಿ ಕಳೆದುಬಿಡ್ತಾರಂತೆ.  ಇಲ್ಲಿ ವಿಚಿತ್ರವಾದ ಮತ್ತೊಂದು ವಿಚಾರ ಏನಂದ್ರೆ ಶೇಕಡಾ 14 ರಷ್ಟು ಮಂದಿ ತಮ್ಮ ಸಂಗಾತಿಯೊಂದಿಗೆ ಟ್ರಾವೆಲ್ ಡೆಸ್ಟಿನೇಷನ್ ಹುಡುಕೋದ್ರಲ್ಲಿ ತುಂಬಾ ಕಾಲಹರಣ ಮಾಡ್ತಾರೆ ಅಂತ ಜಗಳವಾಡೋದ್ರಲ್ಲಿ ಕಾಲ ಕಳೀತಾರಂತೆ.

2018ರ ಮೇ 30 ರಿಂದ ಜೂನ್ 25 ರವರೆಗೆ ದೆಹಲಿ, ಮುಂಬೈ, ಬೆಂಗಳೂರು, ಹೈದ್ರಾಬಾದ್, ಚೆನ್ನೈ, ಪುಣೆಯಲ್ಲಿ 18ವರ್ಷ ಮೇಲ್ಪಟ್ಟ 600 ಮಂದಿಯಿಂದ ಸಮೀಕ್ಷೆ ನಡೆಸಿ ಈ ಡೇಟಾ ಸಂಗ್ರಹಿಸಿದ್ದಾರಂತೆ. ಶೇಕಡಾ 93ರಷ್ಟು ಮಂದಿ ಒಂದು ವಾರದ ಮೊದಲಷ್ಟೇ ಟಿಕೆಟ್ ಮತ್ತು ಹೊಟೇಲ್ ಬುಕ್ಕಿಂಗ್ ಮಾಡ್ತಿವಿ ಅಂತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇಕಡಾ 65 ರಷ್ಟು ಮಂದಿ ದೊಡ್ಡ ಹೊಟೇಲ್ ಗಳ ಸಹವಾಸದಿಂದ ಹಿಂದೆ ಉಳಿಯುತ್ತಾರಂತೆ.

ಶೇಕಡಾ 35ರಷ್ಟು ಜನರು ಉತ್ತಮ ಹೊಟೇಲ್ ಗಳನ್ನ ಬುಕ್ ಮಾಡಿದ್ರೆ, ಶೇಕಡಾ 17ರಷ್ಟು ಜನರು ಅಂತಿಮ ಹಂತದವರೆಗೆ ಕಾಯ್ದು ಆನಂತರ ಹೊಟೇಲನ್ನ ಬುಕ್ ಮಾಡ್ತಾರಂತೆ. ಶೇಕಡಾ 9 ರಷ್ಟು ಮಂದಿ ರಜೆ ಅಪ್ರೂವ್ ಆಗೊದಕ್ಕೆ ಮೊದಲೇ ಹೊಟೇಲ್ ಬುಕ್ಕಿಂಗ್ ಮಾಡಿದ್ರೆ, ಶೇಕಡಾ 9 ರಷ್ಟು ಜನರು ಫ್ಲೈಟ್ ಹತ್ತುವ ಮೊದಲು ಹೊಟೇಲ್ ಬುಕ್ ಮಾಡ್ತಾರಂತೆ. ಶೇಕಡಾ 4ರಷ್ಟು ಜನರು ಅಂತಿಮ ಹಂತದಲ್ಲಿ ತಮ್ಮ ಟ್ರಾವೆಲಿಂಗ್ ಡೆಸ್ಟಿನೇಷನ್ ಬದಲಿಸ್ತಾರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...