alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ ಭಾರತದ ಸ್ವಚ್ಛ ಹಾಗೂ ಕೊಳಕು ರೈಲ್ವೆ ನಿಲ್ದಾಣ

vizag_railway_station_555_1495017303_749x421

ಐಆರ್ಸಿಟಿಸಿ ದೇಶದಾದ್ಯಂತ ಸ್ವಚ್ಛ ಹಾಗೂ ಕೊಳಕು ರೈಲ್ವೆ ನಿಲ್ದಾಣಗಳ ಸಮೀಕ್ಷೆ ಮಾಡಿದೆ. ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ ಮೂಲಕ ಎ1 ಗುಣಮಟ್ಟದ 75 ರೈಲ್ವೆ ನಿಲ್ದಾಣಗಳಲ್ಲಿ ಸರ್ವೆ ಮಾಡಲಾಗಿದೆ. ವಿಶಾಖಪಟ್ಟಣಂನ ರೈಲ್ವೆ ನಿಲ್ದಾಣ ಅತ್ಯಂತ ಸ್ವಚ್ಛ ರೈಲ್ವೆ ನಿಲ್ದಾಣವೆಂಬ ಪಟ್ಟ ಪಡೆದಿದೆ.

ಸರ್ವೆಯಲ್ಲಿ ಎ1 ರೈಲ್ವೆ ನಿಲ್ದಾಣಗಳಲ್ಲಿ ದರ್ಭಾಂಗ್ ಅತ್ಯಂತ ಕೊಳಕು ರೈಲ್ವೆ ನಿಲ್ದಾಣವೆನಿಸಿಕೊಂಡಿದೆ. ದರ್ಭಾಂಗ್ ರೈಲ್ವೆ ನಿಲ್ದಾಣದ ಪ್ಲಾಟ್ ಫಾರ್ಮ್ ಮುರಿದು ಬಿದ್ದಿದ್ದು, ಇನ್ನೊಂದು ಕಡೆ ರೈಲ್ವೆ ನಿಲ್ದಾಣದ ಸುತ್ತಮುತ್ತ ತ್ಯಾಜ್ಯಗಳಿವೆ.

ಅತ್ಯಂತ ಸ್ವಚ್ಛ ರೈಲ್ವೆ ನಿಲ್ದಾಣಗಳ ಪಟ್ಟಿಯಲ್ಲಿ ಸಿಕಂದರಾಬಾದ್ ಎರಡನೇಯ ಹಾಗೂ ಜಮ್ಮು ರೈಲ್ವೆ ನಿಲ್ದಾಣ ಮೂರನೇ ಸ್ಥಾನದಲ್ಲಿದೆ. 10 ಉತ್ತಮ ರೈಲ್ವೆ ನಿಲ್ದಾಣಗಳ ಪಟ್ಟಿಯಲ್ಲಿ ದೆಹಲಿಯ ಆನಂದ್ ವಿಹಾರ್ ಸ್ಥಾನ ಪಡೆದಿದೆ. ನಿಜಾಮುದ್ದೀನ್ ರೈಲ್ವೆ ನಿಲ್ದಾಣ 23 ಹಾಗೂ ಹಳೆ ದೆಹಲಿ ರೈಲ್ವೆ ನಿಲ್ದಾಣ 24ನೇ ಸ್ಥಾನದಲ್ಲಿದೆ.

ಕೊಳಕು ರೈಲ್ವೆ ನಿಲ್ದಾಣದ ಪಟ್ಟಿಯಲ್ಲಿ ಭೋಪಾಲ್ ಎರಡನೇಯ ಹಾಗೂ ಅಂಬಾಲ ರೈಲ್ವೆ ನಿಲ್ದಾಣ ಮೂರನೇ ಸ್ಥಾನದಲ್ಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...