alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಮಾರ್ಟ್ ಫೋನ್ ಖರೀದಿಸ್ತೀರಾ? ಹಾಗಿದ್ರೆ ತಪ್ಪದೆ ಓದಿ

ವರ್ಷಕ್ಕೊಂದು ಸ್ಮಾರ್ಟ್ ಫೋನ್ ಕೊಂಡುಕೊಳ್ಳೋದು ಈಗ ಕಾಮನ್ ಆಗ್ಬಿಟ್ಟಿದೆ. ಹೊಸ ಹೊಸ ಆಪ್ ಗಳು, ಆಪರೇಟಿಂಗ್ ಸಿಸ್ಟಮ್ ಬದಲಾದಂತೆ ಎಲ್ಲರೂ ಹೊಸ ಫೋನ್ ಖರೀದಿಸ್ತಾರೆ.

ನಮ್ಮ ಬಳಿಯಿರುವ ಸ್ಮಾರ್ಟ್ ಫೋನ್ ಹಳತಾಯ್ತು ಅಂತ ಮಾತ್ರವಲ್ಲ, ಅಕ್ಕಪಕ್ಕದವರನ್ನೂ ನಾವು ಗಮನಿಸ್ತೇವೆ. ಅವರ ಕೈಯಲ್ಲಿ ಹೊಸದಿದೆ ನನ್ನ ಬಳಿ ಇಲ್ಲ ಅನ್ನೋ ಕಾರಣಕ್ಕೆ ಬೇರೆ ಫೋನ್ ಕೊಂಡುಕೊಳ್ಳುವವರೂ ಇದ್ದಾರೆ.

ಆದ್ರೆ ಸರಿಯಾದ ಸ್ಮಾರ್ಟ್ ಆಯ್ಕೆ ಮಾಡ್ಕೊಳ್ಳೋದು ತುಂಬಾನೇ ಮುಖ್ಯ. ಹಬ್ಬದ ಸಂದರ್ಭದಲ್ಲೆಲ್ಲ ಬಹುತೇಕ ಎಲ್ಲ ಆನ್ ಲೈನ್ ಸೈಟ್ ಗಳಲ್ಲೂ ಕ್ರೇಝಿ ಆಫರ್ ಇರುತ್ತೆ. ಹಾಗಂತ ತರಾತುರಿಯಲ್ಲಿ ಸ್ಮಾರ್ಟ್ ಫೋನ್ ಕೊಳ್ಳಲು ಹೋಗಿ ಯಡವಟ್ಟು ಮಾಡಿಕೊಳ್ಬೇಡಿ.

ಅದೊಂದು ಜನಪ್ರಿಯ ಡಿವೈಸ್ ಅನ್ನೋ ಕಾರಣಕ್ಕೆ ಖರೀದಿಸಬೇಡಿ: ತಮ್ಮ ಸ್ನೇಹಿತರ ಬಳಿ ಇದೆ ಅನ್ನೋ ಕಾರಣಕ್ಕೆ ಅದೇ ಸ್ಮಾರ್ಟ್ ಫೋನನ್ನ ಖರೀದಿಸುವವರೇ ಹೆಚ್ಚು. ಬಾಸ್ ಕೈಯಲ್ಲಿ ಐಫೋನ್ ನೋಡಿ ಅದನ್ನೇ ತಂದಿರ್ತೀರಾ ಅಂದ್ಕೊಳ್ಳಿ, ಅವರು ಫೇಸ್ ಬುಕ್, ಟ್ವಿಟ್ಟರ್ , ವಾಟ್ಸಾಪ್ ಮಾತ್ರ ಬಳಸುತ್ತಿರ್ತಾರೆ. ನಿಮಗೆ ಮ್ಯೂಸಿಕ್ ಮತ್ತು ವಿಡಿಯೋ ಶೇರ್ ಮಾಡಬೇಕಂದ್ರೆ ಫಜೀತಿ ತಪ್ಪಿದ್ದಲ್ಲ. ಕೆಲ ಫೋನ್ ಗಳು ದುಬಾರಿಯಾದ್ರೂ ನಮಗೆ ಅತ್ಯಂತ ಅವಶ್ಯಕವಾದ ಆಪ್ಷನ್ ಗಳೇ ಅದರಲ್ಲಿ ಇರುವುದಿಲ್ಲ. ಹಾಗಾಗಿ ಮಾರುಕಟ್ಟೆಯಲ್ಲಿ ಯಾವುದು ಜನಪ್ರಿಯವಾಗಿದೆ ಅನ್ನೋದನ್ನು ಯೋಚಿಸದೆ ನಿಮಗೆ ಬೇಕಾದ ಆಪ್ಷನ್ ಅದರಲ್ಲಿದ್ಯಾ ಅನ್ನೋದನ್ನು ಗಮನಿಸಿ.

ಮುಂದಿನ ವರ್ಷನ್ ಗಾಗಿ ಕಾಯಬೇಕು ಅನ್ನೋದೇ ನಮ್ಮ ಸಲಹೆ: ಸ್ಮಾರ್ಟ್ ಫೋನ್ ವಿಚಾರಕ್ಕೆ ಬಂದ್ರೆ ನಿಮ್ಮ ಖರೀದಿ ನಿರ್ಧಾರವನ್ನು ಮುಂದೂಡಿದ್ರೆ ಖಂಡಿತವಾಗ್ಲೂ ಒಳ್ಳೆಯದು. ಮುಂದಿನ ಮಾಡೆಲ್ ಬಿಡುಗಡೆಗೆ ಇನ್ನೇನು ಕೆಲವೇ ದಿನ ಬಾಕಿ ಇದೆ ಎನ್ನುವಾಗ ಹಳೆ ವರ್ಷನ್ ಫೋನ್ ಕೊಳ್ಳಬೇಡಿ. ಯಾಕಂದ್ರೆ ಹೊಸ ವರ್ಷನ್ ಬಿಡುಗಡೆಯಾದ ಮೇಲೆ ಹಳೆ ವರ್ಷನ್ ಫೋನ್ ಗಳ ಬೆಲೆಯಲ್ಲಿ ಭಾರೀ ಇಳಿಕೆಯಾಗುತ್ತದೆ.

ಪರ್ಫಾರ್ಮೆನ್ಸ್ ನೋಡಿ ಹಾರ್ಡ್ ವೇರ್ ವಿವರಗಳ ಬಗ್ಗೆ ಗೊಂದಲ ಬೇಡ: ಪ್ರತಿ ಸ್ಮಾರ್ಟ್ ಫೋನ್ ಪರ್ಫಾರ್ಮೆನ್ಸ್ ಆಪರೇಟಿಂಗ್ ಸಿಸ್ಟಮ್, ಮೆಮೊರಿ ಮ್ಯಾನೇಜ್ಮೆಂಟ್ ಮತ್ತು ಹಾರ್ಡ್ ವೇರ್ ಪವರ್ ಅನ್ನು ಅವಲಂಬಿಸಿರುತ್ತದೆ. ಕ್ವಾಡ್ ಕೋರ್ ಪ್ರೊಸೆಸರ್ ನ ಫೋನ್, ಒಕ್ಟಾ ಕೋರ್ ಹ್ಯಾಂಡ್ ಸೆಟ್ ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಒಂದು ಫೋನ್ ನ ಪರ್ಫಾರ್ಮೆನ್ಸ್ ನಂಬರ್ ಗಳಿಗಿಂತ ಹೆಚ್ಚಾಗಿ ಸಾಫ್ಟ್ ವೇರ್ ಮತ್ತು ಹಾರ್ಡ್ ವೇರ್ ಜೊತೆಯಾಗಿ ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಅವಲಂಬಿಸಿರುತ್ತದೆ.

ಪಿಕ್ಸೆಲ್ ಸಾಂದ್ರತೆ ಅಥವಾ ಪಿಪಿಐ ನೋಡಿ ಮೋಸ ಹೋಗಬೇಡಿ: ಕೊನೆಯಲ್ಲಿ ನೀವು ತಲೆಕೆಡಿಸಿಕೊಳ್ಳಬೇಕಾದದ್ದು ಡಿಸ್ ಪ್ಲೇ ಬಗ್ಗೆ. ಬಹುತೇಕ ಕಂಪನಿಗಳು ಪಿಪಿಐಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತವೆ. ಆದ್ರೆ ಎಲ್ ಸಿ ಡಿ ಸ್ಕ್ರೀನ್ ಗಳಿಗಿಂತ ಓ ಎಲ್ ಇ ಡಿ ಸ್ಕ್ರೀನ್ ಗಳಲ್ಲೇ ಎಲ್ಲವೂ ಅದ್ಭುತವಾಗಿ ಕಾಣಬಲ್ಲದು.

ವಾರಂಟಿ ಮತ್ತು ಸರ್ವೀಸ್ : ಕೆಲ ಮೊಬೈಲ್ ಕಂಪನಿಗಳು ಮಾರಾಟದ ನಂತರದ ಸರ್ವೀಸ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಇನ್ನು ಕೆಲವರು ಪ್ರೈವೇಟ್ ಸರ್ವೀಸ್ ಪ್ರೊವೈಡರ್ಸ್ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಹಾಗಾಗಿ ಸ್ಮಾರ್ಟ್ ಫೋನ್ ಖರೀದಿಸುವ ಮುನ್ನ ನಿಮ್ಮ ಏರಿಯಾದಲ್ಲಿ ರಿಪೇರಿ ಕೇಂದ್ರ ಇದೆಯಾ ಅನ್ನೋದನ್ನು ಚೆಕ್ ಮಾಡಿ. ಸೇಲ್ಸ್ ಮತ್ತು ಸರ್ವೀಸ್ ಗುಣಮಟ್ಟ ತಿಳಿಯಲು ಆನ್ ಲೈನ್ ಫೋರಂಗಳತ್ತ ಚಿತ್ತ ಹರಿಸಿ, ಅಲ್ಲಿ ಯಾವ ರೀತಿಯ ಅಭಿಪ್ರಾಯ ವ್ಯಕ್ತವಾಗಿದೆ ಅನ್ನೋದನ್ನು ತಿಳಿದುಕೊಳ್ಳಿ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...