alex Certify
ಕನ್ನಡ ದುನಿಯಾ       Mobile App
       

Kannada Duniya

ಬಜೆಟ್ 2018 : ಹಣ ಗಳಿಸಲು ಇಲ್ಲಿದೆ ಭರ್ಜರಿ ಅವಕಾಶ

ಬಹು ನಿರೀಕ್ಷಿತ ಮೋದಿ ಬಜೆಟ್ ಗೆ ಕ್ಷಣಗಣನೆ ಶುರುವಾಗಿದೆ. ದೇಶೀಯ ಷೇರು ಮಾರುಕಟ್ಟೆಯಲ್ಲಿ ನಿರಂತರವಾಗಿ ಏರಿಕೆಯಾಗ್ತಿದೆ. ಬಜೆಟ್ ನಲ್ಲಿ ವಸತಿ, ಮೂಲಸೌಕರ್ಯ ಹಾಗೂ ಕೃಷಿ ಸೆಕ್ಟರ್ ಸೇರಿದಂತೆ ಅನೇಕ ಕ್ಷೇತ್ರಗಳ ಬಗ್ಗೆ ಬಜೆಟ್ ನಲ್ಲಿ ದೊಡ್ಡ ನಿರ್ಧಾರಗಳು ಘೋಷಣೆಯಾಗುವ ಸಾಧ್ಯತೆಯಿದೆ.

ಈ ಕ್ಷೇತ್ರಗಳ ಷೇರು ಮಾರುಕಟ್ಟೆಯಲ್ಲಿ ಭಾರೀ ಏರುಪೇರಾಗುವ ಸಾಧ್ಯತೆಯಿದೆ. ಸಣ್ಣ ಹೂಡಿಕೆದಾರರು ದಿವಾನ್ ವಸತಿ, ಹೆಚ್ ಸಿ ಸಿ, ಅದಾನಿ ಸೇರಿದಂತೆ ಕೆಲ ಕಂಪನಿಗಳಿಗೆ ಹೂಡಿಕೆ ಮಾಡಿ ಕೈತುಂಬಾ ಹಣ ಗಳಿಸುವ ಅವಕಾಶ ಸಿಗ್ತಿದೆ. ತಜ್ಞರ ಪ್ರಕಾರ ಸರ್ಕಾರ ಕೈಗೆಟಕುವ ವಸತಿ ಮೇಲೆ ಹೆಚ್ಚಿನ ಗಮನ ನೀಡುವ ಸಾಧ್ಯತೆಯಿದೆ. ಬಡ್ಡಿಯ ಸಹಾಯಧನವನ್ನು ಹೆಚ್ಚಿಸುವ    ಘೋಷಣೆ ಮಾಡುವ ಸಂಭವವಿದೆ. ಹಾಗಾಗಿ ಹೌಸಿಂಗ್ ಫೈನಾನ್ಸ್ ಕಂಪನಿ ದಿವಾನ್ ಹೌಸಿಂಗ್ ನಲ್ಲಿ ಷೇರು ಹೂಡಿಕೆ ಮಾಡಬಹುದು.

ಮೂಲಭೂತ ಸೌಕರ್ಯದ ಮೇಲೂ ಬಜೆಟ್ ನಲ್ಲಿ ಮಹತ್ವದ ನಿರ್ಧಾರ ಘೋಷಣೆಯಾಗುವ ಸಾಧ್ಯತೆಯಿದೆ. ಹಾಗಾಗಿ ಷೇರು ಹೂಡಿಕೆದಾರರು ಹೆಚ್ ಸಿ ಸಿ ಅಥವಾ ಅದಾನಿ ಷೇರು ಖರೀದಿ ಮಾಡಿ ಹೆಚ್ಚಿನ ಹಣ ಗಳಿಸಬಹುದೆಂದು ತಜ್ಞರು ಸಲಹೆ ನೀಡಿದ್ದಾರೆ. ಪಶು ಸಂಗೋಪನೆಗೂ ಕೇಂದ್ರ ಸರ್ಕಾರ ಹೆಚ್ಚಿನ ಗಮನ ನೀಡಲಿದೆ. ಇದ್ರಿಂದ ಪಶುಗಳ ಆರೋಗ್ಯಕ್ಕೆ ಸಂಬಂಧಿಸಿದ ಔಷಧಿಗಳ ಬೆಲೆ ಏರಿಕೆಯಾಗುವ ಸಂಭವವಿದೆ. ಹಾಗಾಗಿ ಲಾಸಾ ಸೂಪರ್ಜೆನಿಕ್ಸ್ ಷೇರುಗಳನ್ನು ಖರೀದಿ ಮಾಡುವುದು ಕೂಡ ಲಾಭಕರ.

ಚುನಾವಣೆ ದೃಷ್ಟಿಯಿಂದ ಕೇಂದ್ರ ಸರ್ಕಾರ ಕೃಷಿ ಮೇಲೆ ಹೆಚ್ಚಿನ ಗಮನ ನೀಡ್ತಿದೆ. ಬೀಜ ಹಾಗೂ ಕೃಷಿಗೆ ಸಂಬಂಧಿಸಿದ ವಸ್ತುಗಳ ತಯಾರಿಕೆ ಹಾಗೂ ಮಾರಾಟ ಕಂಪನಿಗಳಿಗೆ ಇದ್ರಿಂದ ಲಾಭವಾಗಲಿದೆ. ಷೇರು ಹೂಡಿಕೆದಾರರು ಮೊನ್ಸಾಂಟೊ ಸೇರಿದಂತೆ ಕೀಟನಾಶಕ, ಬೀಜ ತಯಾರಿಕಾ ಕಂಪನಿಗಳ ಷೇರಿನ ಮೇಲೆ ಹಣ ಹೂಡಬಹುದೆಂದು ತಜ್ಞರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...