alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿ ಶಾಕ್ ಗೆ ತತ್ತರಿಸಿದ ಕಾಳಧನಿಕರು

swiss

ನವದೆಹಲಿ: ಕಾಳಧನಿಕರನ್ನು ನಮ್ಮ ಸರ್ಕಾರ ಸುಮ್ಮನೆ ಬಿಡಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು, ಫಲ ಕೊಟ್ಟಿದೆ.

ಸ್ವಿಸ್ ಬ್ಯಾಂಕ್ ಗಳಲ್ಲಿದ್ದ ಭಾರತೀಯರ ಹಣದ ಪ್ರಮಾಣ ಗಣನೀಯವಾಗಿ ಕುಸಿದಿದೆ. ಭಾರತ 88 ನೇ ಸ್ಥಾನಕ್ಕೆ ಕುಸಿದಿದ್ದು, ಸ್ವಿಸ್ ಬ್ಯಾಂಕ್ ಗಳಲ್ಲಿ ಹೆಚ್ಚು ಖಾತೆಗಳಲ್ಲಿ ಹಣ ಕೂಡಿಟ್ಟ ದೇಶವಾಗಿ ಯುಕೆ ಮೊದಲ ಸ್ಥಾನದಲ್ಲಿದೆ.

ಸ್ವಿಸ್ ನ್ಯಾಷನಲ್ ಬ್ಯಾಂಕ್ ಬಿಡುಗಡೆ ಮಾಡಿರುವ 2016 ರ ಅಂತ್ಯದ ವರದಿಯಲ್ಲಿ ಸ್ವಿಸ್ ಬ್ಯಾಂಕ್ ಗಳಲ್ಲಿ ಒಟ್ಟು ವಿದೇಶಿಯರ ಹಣದ ಪ್ರಮಾಣದಲ್ಲಿ ಭಾರತೀಯರ ಹಣ ಶೇ. 0.04 ರಷ್ಟಿದೆ ಎಂದು ಹೇಳಿದೆ.

2004 ರಲ್ಲಿ 37 ನೇ ಸ್ಥಾನದಲ್ಲಿದ್ದ ಭಾರತ, 2007 ರಲ್ಲಿ ಟಾಪ್ 50 ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆದಿತ್ತು. 2015 ರಲ್ಲಿ 75 ನೇ ಸ್ಥಾನದಲ್ಲಿತ್ತು.

ಕಾಳಧನಿಕರನ್ನು ಸದೆ ಬಡಿಯಲು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕ್ರಮ ಕೈಗೊಂಡು ಸ್ವಿಜರ್ ಲೆಂಡ್ ನೊಂದಿಗೆ ಹೊಸ ಒಪ್ಪಂದ ಮಾಡಿಕೊಂಡಿದೆ.

ಅದಾದ ಬಳಿಕ ಸ್ವಿಸ್ ಬ್ಯಾಂಕ್ ನಲ್ಲಿ ಭಾರತೀಯರ ಕಪ್ಪು ಹಣದ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಕುಸಿದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...