alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಧಾನಿ ಮೋದಿ ಕುರ್ತಾ-ಜಾಕೆಟ್ ಗಳಿಗೆ ಈಗ ಬಲು ಬೇಡಿಕೆ

ಪ್ರಧಾನಿ ಮೋದಿ ತೊಡುವ ಕುರ್ತಾ ಹಾಗೂ ಜಾಕೆಟ್ ಬಹಳ ಪ್ರಸಿದ್ಧ. ಮೋದಿಗೆ ಪ್ರಿಯವಾಗಿರುವ ಈ ವಸ್ತ್ರವನ್ನು ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜೇ ಇನ್ ಅವರಿಗೆ ಉಡುಗೊರೆಯಾಗಿ ನೀಡಿದ ಬಳಿಕವಂತೂ ಇದು ಯುವ ಜನಾಂಗದಲ್ಲಿ ಹೊಸ ಫ್ಯಾಶನ್ ಅನ್ನೇ ಹುಟ್ಟುಹಾಕಿದೆ.

ಮೋದಿಯವರ ಕುರ್ತಾ ಹಾಗೂ ಜಾಕೆಟ್ ಗೆ ಇರುವ ಜನಪ್ರಿಯತೆಯನ್ನೇ ಬಂಡವಾಳ ಮಾಡಿಕೊಂಡಿರುವ ಖಾದಿ ಇಂಡಿಯಾ, ಮೋದಿಯವರ ಜನ್ಮದಿನವಾದ ಸೆಪ್ಟೆಂಬರ್ 17ರಂದು ದೆಹಲಿಯ ಶಾಪಿಂಗ್ ಸ್ವರ್ಗ ಕನ್ನೌಟ್ ನಲ್ಲಿರುವ ಶೋ ರೂಂನಲ್ಲಿ ಮೋದಿ- ಜಾಕೆಟ್ ಗಳು, ಮೋದಿ ಕುರ್ತಾಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕಿಟ್ಟಿದ್ದರು.

ಈಗ ಪ್ರತಿದಿನವೂ ಈ ವಸ್ತ್ರಗಳು ಹಾಟ್ ಕೇಕ್ ನಂತೆ ಮಾರಾಟವಾಗುತ್ತಿವೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ ರಾಷ್ಟ್ರ ರಾಜಧಾನಿ ನವದೆಹಲಿಯ ಏಳು ಖಾದಿ ವಸ್ತ್ರ ಭಂಡಾರಗಳಲ್ಲಿ ಪ್ರತಿದಿನ 1400ಕ್ಕೂ ಅಧಿಕ ಮೋದಿ ಶೈಲಿಯ ವಸ್ತ್ರಗಳು ಮಾರಾಟವಾಗುತ್ತಿವೆ ಅಂತೆ. ಅಂದರೆ ಪ್ರತಿ ಭಂಡಾರದಲ್ಲೂ ಸರಾಸರಿ 200ಕ್ಕಿಂತಲೂ ಹೆಚ್ಚು ಮೋದಿ ವಸ್ತ್ರಗಳು ಮಾರಾಟವಾಗಿವೆ ಎನ್ನಲಾಗಿದೆ.

ಜವಾಹರ್ ಲಾಲ್ ನಂತರ ಪ್ರಧಾನಿಯೊಬ್ಬರ ವಸ್ತ್ರಶೈಲಿ ಜನಪ್ರಿಯವಾಗಿದ್ದು ಇದೇ ಮೊದಲು. ನೆಹರುರವರು ಶ್ವೇತ ವರ್ಣದ ನಿಲುವಂಗಿ ಬಿಟ್ಟರೆ ಬೇರೆ ಯಾವ ಬಣ್ಣದ್ದನ್ನೂ ತೊಡುತ್ತಿರಲಿಲ್ಲ. ಮೋದಿಯವರ ವಸ್ತ್ರಗಳು ನೂತನ ವಿನ್ಯಾಸ ಹಾಗೂ ಅಪರೂಪದ ವರ್ಣಗಳಿಂದ ಕೂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...