alex Certify
ಕನ್ನಡ ದುನಿಯಾ       Mobile App
       

Kannada Duniya

ಹಣಕಾಸು ವರ್ಷದಲ್ಲಿಲ್ಲ ಯಾವುದೇ ಬದಲಾವಣೆ..?

ಕೇಂದ್ರ ಸರ್ಕಾರ ಹಣಕಾಸು ವರ್ಷವನ್ನು ಜನವರಿಯಿಂದ ಡಿಸೆಂಬರ್ ಗೆ ಬದಲಾಯಿಸುವ ಸಾಧ್ಯತೆಗಳಿಲ್ಲ. ಆದ್ರೆ ಎರಡು ವಾರ ಮೊದಲೇ ಬಜೆಟ್ ಮಂಡನೆ ಮಾಡುವ ನಿರೀಕ್ಷೆ ಇದೆ. ಪ್ರತಿವರ್ಷ ಫೆಬ್ರವರಿ 28ರಂದು ಬಜೆಟ್ ಮಂಡಿಸುವುದು ವಾಡಿಕೆ.

ಆದ್ರೆ ಈ ವರ್ಷ ಫೆಬ್ರವರಿ 1ರಂದೇ ಬಜೆಟ್ ಮಂಡಿಸಲಾಗಿತ್ತು. ಬ್ರಿಟಿಷ್ ಆಡಳಿತದ ಸಮಯದಿಂದ್ಲೂ ಅಂದ್ರೆ ಸುಮಾರು 150 ವರ್ಷಗಳಿಂದ ಭಾರತದಲ್ಲಿ ಎಪ್ರಿಲ್-ಮಾರ್ಚ್ ವರೆಗೆ ಹಣಕಾಸು ವರ್ಷವೆಂದು ಪರಿಗಣಿಸಲಾಗುತ್ತಿದೆ. ಆದ್ರೆ ವಿತ್ತ ವರ್ಷವನ್ನು ಜನವರಿ-ಡಿಸೆಂಬರ್ ಗೆ ಬದಲಾಯಿಸೋ ಬಗ್ಗೆ ಸರ್ಕಾರ ಚಿಂತನೆ ನಡೆಸಿತ್ತು.

ಈ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲು ಸಮಿತಿಯೊಂದನ್ನು ಕೂಡ ರಚಿಸಲಾಗಿದೆ. ಆದ್ರೆ 2018-19ರಲ್ಲಿ ಹಣಕಾಸು ವರ್ಷ ಬದಲಾವಣೆ ಮಾಡುವ ಸಾಧ್ಯತೆಯಿಲ್ಲ ಅಂತಾ ಅಧಿಕಾರಿಗಳು ಹೇಳ್ತಿದ್ದಾರೆ. ಹಣಕಾಸು ವರ್ಷ ಬದಲಾವಣೆ ಮಾಡಿದ್ರೆ ಅಕ್ಟೋಬರ್ ಅಥವಾ ನವೆಂಬರ್ ನಲ್ಲಿ ಬಜೆಟ್ ಮಂಡಿಸಬೇಕಾಗುತ್ತದೆ, ಅದು ಅಸಾಧ್ಯ ಎನ್ನಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...