alex Certify
ಕನ್ನಡ ದುನಿಯಾ       Mobile App
       

Kannada Duniya

ಬಂದ್ ಆಗಲಿವೆ ನಾಲ್ಕು ಬ್ಯಾಂಕ್: ದೊಡ್ಡ ಬದಲಾವಣೆಗೆ ಮುಂದಾದ ಮೋದಿ

ಬ್ಯಾಂಕಿಂಗ್ ಕ್ಷೇತ್ರದ ಪರಿಸ್ಥಿತಿ ಸುಧಾರಣೆಗೆ ನರೇಂದ್ರ ಮೋದಿ ಸರ್ಕಾರ ಆದಷ್ಟು ಬೇಗ ದೊಡ್ಡ ನಿರ್ಧಾರ ಕೈಗೊಳ್ಳಲಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮೆಗಾ ವಿಲೀನವೊಂದು ನಡೆಯಲಿದೆ ಎಂದು ಮೂಲಗಳು ಹೇಳಿವೆ. ನಾಲ್ಕು ಸರ್ಕಾರಿ ಬ್ಯಾಂಕ್ ಗಳನ್ನು ಸೇರಿಸಿ ಒಂದು ದೊಡ್ಡ ಬ್ಯಾಂಕ್ ನಿರ್ಮಾಣದ ಕೆಲಸ ನಡೆಯುತ್ತಿದೆ.

ಮಾಹಿತಿಗಳ ಪ್ರಕಾರ, ಐಡಿಬಿಐ, ಒಬಿಸಿ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ ಸೇರಿಸುವ ಪ್ರಸ್ತಾಪ ಕೇಳಿ ಬಂದಿದೆ. ಹೀಗಾದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಂತ್ರ ದೇಶದ ಅತಿ ದೊಡ್ಡ ಬ್ಯಾಂಕ್ ಆಗಲಿದೆ. ಹೊಸ ಬ್ಯಾಂಕ್ ಬಳಿ 16.58 ಲಕ್ಷ ಕೋಟಿ ಆಸ್ತಿಯಿರಲಿದೆ.

2018 ರ ಹಣಕಾಸು ವರ್ಷದಲ್ಲಿ ಈ ನಾಲ್ಕು ಬ್ಯಾಂಕ್ ಗಳಿಂದ 21646 ಸಾವಿರ ಕೋಟಿ ನಷ್ಟವಾಗಿದೆ. ಹಾಗಾಗಿ ನಾಲ್ಕು ಬ್ಯಾಂಕ್ ಗಳ ವಿಲೀನಕ್ಕೆ ಸರ್ಕಾರ ಮುಂದಾಗಿದೆ. ಹಣಕಾಸು ಸಚಿವಾಲಯದ ಮೂಲಗಳ ಪ್ರಕಾರ, ಬ್ಯಾಂಕ್ ಗಳ ವಿಲೀನವಾದ್ರೆ ಬ್ಯಾಂಕ್ ಗಳ ಪರಿಸ್ಥಿತಿ ಸುಧಾರಿಸಲಿದೆ. ಜೊತೆಗೆ ದುರ್ಬಲ ಬ್ಯಾಂಕ್ ಗಳಿಗೆ ಬಲ ಸಿಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...