alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆಯಲ್ಲೇ ಕುಳಿತು ಕೆಲವೇ ನಿಮಿಷದಲ್ಲಿ ಗಳಿಸಿ 25 ಸಾವಿರ ರೂ.

ಸೃಜನಶೀಲ ಯುವಜನತೆಗೆ ಮೋದಿ ಸರ್ಕಾರ ಉಡುಗೊರೆಯೊಂದನ್ನು ನೀಡ್ತಿದೆ. ಮೋದಿ ಸರ್ಕಾರದ ಈ ಸ್ಪರ್ಧೆಯಲ್ಲಿ ಪಾಲ್ಗೊಂಡು 25 ಸಾವಿರ ರೂಪಾಯಿ ಗಳಿಸುವ ಅವಕಾಶ ನಿಮಗೆ ಸಿಗ್ತಿದೆ. ಇದಕ್ಕಾಗಿ ಕಷ್ಟಪಡಬೇಕಾಗಿಲ್ಲ. ಎಲ್ಲಿಗೂ ಹೋಗಬೇಕಾಗಿಲ್ಲ. ಮನೆಯಲ್ಲೇ ಕುಳಿತು ಕೆಲವೇ ನಿಮಿಷಗಳಲ್ಲಿ 25 ಸಾವಿರ ರೂಪಾಯಿ ಗಳಿಸಬಹುದು.

ಮೋದಿ ಸರ್ಕಾರ ಈ ಬಾರಿ ಪ್ರಬಂಧ ಸ್ಪರ್ಧೆಯೊಂದನ್ನು ಏರ್ಪಡಿಸಿದೆ. ಈ ಸ್ಪರ್ಧೆಯಲ್ಲಿ ಶಾಲಾ ಮಕ್ಕಳಿಂದ ಹಿಡಿದು 25 ವರ್ಷದ ಯುವಜನತೆ ಪಾಲ್ಗೊಳ್ಳಬಹುದಾಗಿದೆ. ಈ ಸ್ಪರ್ಧೆಯಲ್ಲಿ ಜಯಗಳಿಸಿದ್ರೆ ನಿಮಗೆ 25 ಸಾವಿರ ರೂಪಾಯಿಯವರೆಗೆ ಹಣ ಸಿಗಲಿದೆ. ಅವೆರ್ನೆಸ್ ಪ್ರೋಗ್ರಾಂ ಆನ್ ಇಂಡಿಯನ್ ಫಾರಿನ್ ಪಾಲಿಸಿ (ಭಾರತೀಯ ವಿದೇಶಾಂಗ ನೀತಿ ಬಗ್ಗೆ ಜಾಗೃತಿ ಕಾರ್ಯಕ್ರಮ) ಆಯೋಜನೆ ಮಾಡಿದೆ.

ಸ್ಪರ್ಧೆ ಎರಡು ವಿಭಾಗದಲ್ಲಿ ನಡೆಯಲಿದೆ. ಒಂದು ಕಿರಿಯರ ವಿಭಾಗ (15-18 ವರ್ಷ) ಇನ್ನೊಂದು ಹಿರಿಯರ ವಿಭಾಗ (18-25 ವರ್ಷ). ಕಿರಿಯರ ವಿಭಾಗದ ವಿಜೇತ ವಿದ್ಯಾರ್ಥಿಗೆ 15 ಸಾವಿರ, ಎರಡನೇ ಸ್ಥಾನಕ್ಕೆ 10 ಸಾವಿರ ಹಾಗೂ ಮೂರನೇ ಸ್ಥಾನಕ್ಕೆ 5 ಸಾವಿರ ರೂಪಾಯಿ ಬಹುಮಾನ ಸಿಗಲಿದೆ.

ಹಿರಿಯರ ವಿಭಾಗದಲ್ಲಿ ಮೊದಲ ಸ್ಥಾನಕ್ಕೆ 25 ಸಾವಿರ, ಎರಡನೇ ಸ್ಥಾನಕ್ಕೆ 15 ಹಾಗೂ ಮೂರನೇ ಸ್ಥಾನಕ್ಕೆ 10 ಸಾವಿರ ರೂಪಾಯಿ ಸಿಗಲಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ನಿಯಮ ಹಾಗೂ ವಿಷಯದ ಬಗ್ಗೆ Mygov.in ನಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...