alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕಾರಣಕ್ಕೆ ಇಳಿಕೆಯಾಗ್ತಿದೆ 6 ಕೋಟಿ “ಮೊಬೈಲ್ ಗ್ರಾಹಕ”ರ ಸಂಖ್ಯೆ

ಟೆಲಿಕಾಂ ವಲಯದಲ್ಲಿ ಮುಂದಿನ 6 ತಿಂಗಳೊಳಗೆ ಚಂದಾದಾರರ ಸಂಖ್ಯೆ 6 ಕೋಟಿ ಕಡಿಮೆಯಾಗುವ ಸಾಧ್ಯತೆಯಿದೆ. ಗ್ರಾಹಕರ ಚಿಂತನೆ ಈಗ ಬದಲಾಗಿದೆ. ಎರಡು, ಮೂರು ಸಿಮ್ ಬಳಸುವ ಬದಲು ಗ್ರಾಹಕರು ಒಂದು ಸಿಮ್ ಬಳಕೆಗೆ ಹೆಚ್ಚು ಒತ್ತು ನೀಡ್ತಿದ್ದಾರೆ.

ಟೆಲಿಕಾಂ ಕಂಪನಿಗಳಲ್ಲಿ ಬೆಲೆ ಯುದ್ಧ ನಡೆಯುತ್ತಿದೆ. ಇದು ಗ್ರಾಹಕರಿಗೆ ಲಾಭವನ್ನುಂಟು ಮಾಡಿದೆ. ಹೆಚ್ಚುವರಿ ಡೇಟಾ ಹಾಗೂ ಉಚಿತ ಕರೆ ಸೌಲಭ್ಯ ಸಿಗ್ತಿರುವ ಕಾರಣ ಗ್ರಾಹಕರು ಮೂರು ನಾಲ್ಕು ಸಿಮ್ ಗೆ ಹಣ ನೀಡುವ ಬದಲು ಒಂದೇ ಸಿಮ್ ಬಳಕೆಗೆ ಮುಂದಾಗಿದ್ದಾರೆ.

ಆಗಸ್ಟ್ ಕೊನೆಯಲ್ಲಿ ದೇಶದಲ್ಲಿ ಒಟ್ಟು 1.2 ಶತಕೋಟಿ ಚಂದಾದಾರರಿದ್ದರು. ಪ್ರಸ್ತುತ ಒಂದು ಸಿಮ್ ಬಳಸುವವರ ಸಂಖ್ಯೆ 7.3 ದಶಲಕ್ಷದಿಂದ 7.5 ದಶಲಕ್ಷದವರೆಗಿದೆ. ಉಳಿದವರು ಎರಡಕ್ಕಿಂತ ಹೆಚ್ಚು ಸಿಮ್ ಬಳಸುತ್ತಿದ್ದಾರೆ. COAIನ ನಿರ್ದೇಶಕ ರಾಜನ್ ಮಾಥ್ಯೂ ಪ್ರಕಾರ, ಮುಂದಿನ ಆರು ತಿಂಗಳಲ್ಲಿ ಚಂದಾದಾರರ ಸಂಖ್ಯೆಯಲ್ಲಿ 2.5ರಿಂದ 3 ಕೋಟಿಯಷ್ಟು ಇಳಿಕೆ ಕಾಣಲಿದೆಯಂತೆ.

ರಿಲಯನ್ಸ್ ಜಿಯೋಗೆ ಸ್ಪರ್ಧೆ ನೀಡಲು ಏರ್ಟೆಲ್ ಹಾಗೂ ವೋಡಾಫೋನ್ ಸಿದ್ಧವಾಗಿದೆ. ತನ್ನ ಸೇವೆಯಲ್ಲಿ ಸಾಕಷ್ಟು ಬದಲಾವಣೆ ತಂದಿದೆ. ಹಾಗಾಗಿ ಡೇಟಾಕ್ಕೆ ಒಂದು ಸಿಮ್, ಕರೆಗೆ ಒಂದು ಸಿಮ್ ಇಟ್ಟುಕೊಳ್ಳುವ ಅವಶ್ಯಕತೆ ಗ್ರಾಹಕರಿಗಿಲ್ಲ. ಎಲ್ಲ ಕಂಪನಿಗಳ ಸೇವೆ ಸುಮಾರು ಒಂದೇ ರೀತಿಯಿರುವ ಕಾರಣ ಒಂದು ಸಿಮ್ ಗೆ ಜನರು ಹೆಚ್ಚು ಮಾನ್ಯತೆ ನೀಡ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...