alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ಮಿಸ್ಡ್ ಕಾಲ್ ಯಾರಿಗೆ ಲಾಭ ಗೊತ್ತಾ..?

missed_call_profit_mobileಯಾರಿಗಾದರೂ ಮಿಸ್ಡ್ ಕಾಲ್ ಕೊಟ್ಟರೆ, ಎಂತಾ ಕಂಜೂಸ್ ನೀನು ಎಂದು ಹೇಳುತ್ತಾರೆ. ಹೀಗೆ ನೀವು ದುಡ್ಡು ಉಳಿಸಲು ಕೊಟ್ಟ ಮಿಸ್ಡ್ ಕಾಲ್ ನಿಂದ ಕಂಪನಿಗಳು ಎಷ್ಟು ಲಾಭ ಮಾಡಿಕೊಳ್ಳುತ್ವೆ ಗೊತ್ತಾ?

ನಿಮ್ಮ ಮಿಸ್ಡ್ ಕಾಲ್ ನಿಂದ ಲಾಭ ಪಡೆಯುವ ಕಂಪನಿ, ತನ್ನ ವಸ್ತುಗಳನ್ನು ಅಥವಾ ಸರ್ವೀಸ್ ಅನ್ನು ಖರೀದಿಸುವಂತೆ ನಿಮಗೆ ಪ್ರೇರೇಪಿಸುತ್ತದೆ. ಹಲವು ಬಾರಿ ಸಫಲವಾಗುತ್ತೆ ಕೂಡಾ. ಭಾರತದಂತ ದೇಶದಲ್ಲಿ ಇಂದು ಮಿಸ್ಡ್ ಕಾಲ್ ಎಂತಹ ದಂಧೆಯಾಗಿದೆಯೆಂದರೆ ದೇಶ- ವಿದೇಶದ ಕಂಪನಿಗಳೂ ಇದರಿಂದ ಲಾಭ ಹೊಂದುತ್ತಿವೆ.

ಕಂಪನಿಗಳು ಇದನ್ನು ‘ಮಿಸ್ಡ್ ಕಾಲ್ ಮಾರ್ಕೆಟಿಂಗ್’ ಎಂದೇ ಕರೆಯುತ್ತವೆ. ಒಬ್ಬ ಗ್ರಾಹಕ ಯಾರಿಗಾದರೂ ಕರೆ ಮಾಡಿ ಆ ಕರೆಯನ್ನು ಅರ್ಧಕ್ಕೇ ಸ್ಥಗಿತಗೊಳಿಸುತ್ತಾನೆ. ನಂತರ ಕಂಪನಿ ಅದೇ ನಂಬರ್ ಗೆ ಕರೆಮಾಡಿ ತನ್ನ ಸರ್ವೀಸ್ ಮತ್ತು ಪ್ರೊಡಕ್ಟ್ ಬಗ್ಗೆ ಮಾಹಿತಿ ಕೊಡುತ್ತದೆ. ಮಾರುಕಟ್ಟೆ ಮಾಡಲು ಕಂಪನಿಗೆ ಹೊಸ ನಂಬರ್ ಹುಡುಕುವ ಗೊಡವೆಯಿಲ್ಲ. 100 ಕೋಟಿ ಮೊಬೈಲ್ ಗ್ರಾಹಕರು ಹೀಗೇ ಮಾಡಿದಲ್ಲಿ ಕಂಪನಿಗೆ ಎಷ್ಟು ನಂಬರ್ ದೊರಕಿತು ಎಂಬುದನ್ನು ವಿಚಾರ ಮಾಡಿ.

ನೆಸ್ಲೆ ಕೂಡ ತನ್ನ ಪ್ರೊಡಕ್ಟ್ ಗಾಗಿ ಮಿಸ್ಡ್ ಕಾಲ್ ಅನ್ನು ಬಳಸಿಕೊಂಡಿತು. ನೆಸ್ಲೆ ತನ್ನ ಪ್ರೊಡಕ್ಟಿನ ವಿಜ್ಞಾಪನೆಗಳನ್ನು ಕೇಳುವವರಿಗೆ ಫ್ರೀ ಟಾಕ್ ಟೈಮ್ ಕೊಡುತ್ತೇವೆಂದು ಹೇಳಿತು. ಮಿಸ್ಡ್ ಕಾಲ್ ಸೇವೆ ಒದಗಿಸುವ ಕಂಪನಿಗಳಿಗೆ, ಮಾರ್ಕೆಟಿಂಗ್ ಮತ್ತು ವಿಜ್ಞಾಪನೆಗಳಿಗಾಗಿ ಗ್ರಾಹಕರನ್ನು ಹುಡುಕಲು ಹೆಚ್ಚಿನ ಖರ್ಚಾಗುತ್ತದೆ. ಆದರೆ ಮಿಸ್ಡ್ ಕಾಲ್ ನೆರವಿನಿಂದ ಗ್ರಾಹಕರೇ ಕಂಪನಿಯನ್ನು ಹುಡುಕಿಕೊಂಡು ಬರುತ್ತಾರೆ. ಇದರಿಂದ ಲಾಭ ಕಂಪನಿಗೇ ಆಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...