alex Certify
ಕನ್ನಡ ದುನಿಯಾ       Mobile App
       

Kannada Duniya

ಖುಷಿ ಸುದ್ದಿ: ಸುಳ್ಳು ಜಾಹೀರಾತಿಗೆ ಬೀಳಲಿದೆ ಬ್ರೇಕ್

fast-food-ads

ಈಗಿನ ಜಾಹೀರಾತುಗಳನ್ನು ನಂಬೋದೇ ಕಷ್ಟ. ತೋರಿಸೋದು ಒಂದು, ಕೊಡೋದು ಇನ್ನೊಂದು. ಎಷ್ಟೇ ಜಾಗ್ರತೆ ವಹಿಸಿದ್ರೂ ಮೋಸ ಹೋಗೋದು ಗ್ಯಾರಂಟಿ. ಇನ್ಮುಂದೆ ಹೀಗಾಗೋದಿಲ್ಲ.

ಜನರಲ್ಲಿ ಭ್ರಮೆ ಹುಟ್ಟಿಸಿ ಅವರ ದಾರಿ ತಪ್ಪಿಸುವ ಜಾಹೀರಾತು ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರ 1986 ರ ಕನ್ಸ್ಯೂಮರ್ ಪ್ರೊಟೆಕ್ಷನ್ ಆಕ್ಟ್ ಪರಿಷ್ಕರಿಸಲು ನಿರ್ಧರಿಸಿದೆ.

ಜನರಿಗೆ ಆಸೆ ತೋರಿಸಿ ಅವರ ದಾರಿ ತಪ್ಪಿಸುವ ಜಾಹೀರಾತು ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ವಿಧೇಯಕವನ್ನು ಸಿದ್ಧಪಡಿಸಲಾಗಿದೆ. ಈ ವಿಧೇಯಕದ ಪ್ರಕಾರ ಮೊದಲು ತಪ್ಪು ಮಾಡಿದ ಕಂಪನಿಗೆ ಎರಡು ವರ್ಷ ಜೈಲು ಶಿಕ್ಷೆ ಹಾಗೂ 10 ಲಕ್ಷ ರೂಪಾಯಿ ದಂಡ ವಿಧಿಸಲಾಗುವುದು. ಎರಡನೇ ಬಾರಿ ಇದೇ ತಪ್ಪು ಮರುಕಳಿಸಿದ್ರೆ 5 ವರ್ಷ ಜೈಲು ಹಾಗೂ 50 ಲಕ್ಷ ರೂಪಾಯಿ ದಂಡ ಬೀಳಲಿದೆ.

ಕನ್ಸ್ಯೂಮರ್ ಪ್ರೊಟೆಕ್ಷನ್ ವಿಧೇಯಕವನ್ನು ಸಂಸದೀಯ ಸ್ಥಾಯಿ ಸಮಿತಿಗೆ ಕಳುಹಿಸಲಾಗಿತ್ತು. ಈಗ ಕ್ಯಾಬಿನೆಟ್, ಟೆಲಿಕಾಂ ಸಚಿವಾಲಯ, ಹಣಕಾಸು ಸೇವಾ ವಿಭಾಗ ಸೇರಿದಂತೆ ಸಂಬಂಧಿಸಿದ ಸಚಿವಾಲಯಕ್ಕೆ ಕಳುಹಿಸಲಾಗಿದೆ. ಈ ಮಸೂದೆ ಪಾಸ್ ಆದಲ್ಲಿ ಜಾಹೀರಾತು ಕಂಪನಿಗಳ ಮೋಸಕ್ಕೆ ಬ್ರೇಕ್ ಬೀಳಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...