alex Certify
ಕನ್ನಡ ದುನಿಯಾ       Mobile App
       

Kannada Duniya

ತೊಗರಿ ಬೆಳೆಗಾರರಿಗೆ ಇಲ್ಲಿದೆ ಸಿಹಿ ಸುದ್ದಿ

ನವದೆಹಲಿ: ಖರೀದಿ ಕೇಂದ್ರಗಳಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿಗೆ ಕಾಲಾವಕಾಶವನ್ನು ವಿಸ್ತರಿಸಲಾಗಿದೆ.

ಮಾರ್ಚ್ 28 ರ ವರೆಗೂ ತೊಗರಿ ಖರೀದಿಸಲಾಗುವುದು ಎಂದು ಕೇಂದ್ರ ಕೃಷಿ ಸಚಿವರಾದ ರಾಧಾಮೋಹನ್ ಸಿಂಗ್ ತಿಳಿಸಿದ್ದಾರೆ. ಕೇಂದ್ರ ಸಚಿವ ಅನಂತ್ ಕುಮಾರ್ ಮನವಿ ಮಾಡಿದ ಮೇರೆಗೆ ಕೃಷಿ ಸಚಿವರು, ತೊಗರಿ ಖರೀದಿ ಕೇಂದ್ರಗಳಲ್ಲಿ ಮಾರ್ಚ್ 28 ರವರೆಗೂ ಖರೀದಿಗೆ ಕಾಲಾವಕಾಶ ವಿಸ್ತರಿಸಿದ್ದಾರೆ.

ಡಿಸೆಂಬರ್ ನಲ್ಲಿ 2.64 ಲಕ್ಷ ಟನ್ ತೊಗರಿ ಖರೀದಿಗೆ ಅನುಮತಿ ನೀಡಿದ್ದ ಕೇಂದ್ರ ಸರ್ಕಾರ, 90 ದಿನಗಳಲ್ಲಿ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚಿಸಿತ್ತು. ಮಾರ್ಚ್ 6 ರಂದು ರಾಜ್ಯ ಸರ್ಕಾರದ ಮನವಿಯ ಮೇರೆಗೆ ಹೆಚ್ಚುವರಿಯಾಗಿ 1 ಲಕ್ಷ ಟನ್ ಖರೀದಿಗೆ ಅನುಮತಿ ನೀಡಿತ್ತು.

ಮಾರ್ಚ್ 12 ಕ್ಕೆ ಕಾಲಾವಕಾಶ ಮುಗಿದ ಕಾರಣ, ಸಚಿವ ಅನಂತ್ ಕುಮಾರ್ ಖರೀದಿ ಪ್ರಕ್ರಿಯೆ ದಿನಾಂಕ ವಿಸ್ತರಣೆಗೆ ಮನವಿ ಮಾಡಿದ್ದು, ಅದರಂತೆ ಮಾರ್ಚ್ 28 ರ ವರೆಗೆ ಖರೀದಿಗೆ ಅನುಮತಿ ನೀಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...