alex Certify
ಕನ್ನಡ ದುನಿಯಾ       Mobile App
       

Kannada Duniya

ಎಸ್.ಬಿ.ಐ. ಗ್ರಾಹಕರೇ ಗಮನಿಸಿ: ನಿಮ್ಮ ಖಾತೆಯಲ್ಲಿರಬೇಕು ಇಷ್ಟು ಮಿನಿಮಮ್ ಬ್ಯಾಲೆನ್ಸ್…!

ಸಾಮಾನ್ಯ ಉಳಿತಾಯ ಖಾತೆದಾರರು ಎವರೇಜ್ ಮಂತ್ಲಿ ಬ್ಯಾಲೆನ್ಸ್ ಇಟ್ಟುಕೊಂಡಿರಬೇಕು ಎಂದು ಕೆಲವು ಬ್ಯಾಂಕ್‍ಗಳಲ್ಲಿ ನಿಯಮ ಮಾಡಿದ್ದರೂ ಹಲವರಿಗೆ ತಮ್ಮ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಎಷ್ಟಿರಬೇಕು ಎಂಬುದು ಸರಿಯಾಗಿ ಗೊತ್ತಿಲ್ಲ. ಅದಕ್ಕೆಂದೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರ ಖಾತೆಯಲ್ಲಿ ಇರಬೇಕಾದ ಕನಿಷ್ಟ ತಿಂಗಳ ಬ್ಯಾಲೆನ್ಸ್ ವಿವರಗಳನ್ನು ಪ್ರಕಟಿಸಿವೆ.

ಖಾತೆದಾರರ ಪ್ರದೇಶಕ್ಕನುಸಾರವಾಗಿ ಕನಿಷ್ಟ ತಿಂಗಳ ಬ್ಯಾಲೆನ್ಸ್ ನಿಗದಿಪಡಿಸಲಾಗಿದ್ದು, ಅಷ್ಟು ಬ್ಯಾಲೆನ್ಸ್ ಇರದಿದ್ದರೆ ವಿಧಿಸಬಹುದಾದ ದಂಡದ ವಿವರ ಪ್ರಕಟಿಸಲಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಮೆಟ್ರೋ(ಮಹಾನಗರ) ಪ್ರದೇಶದ ಖಾತೆದಾರರು 3 ಸಾವಿರ, ಪಟ್ಟಣ-3 ಸಾವಿರ, ಅರೆಪಟ್ಟಣ- 2 ಸಾವಿರ ಹಾಗೂ ಗ್ರಾಮೀಣ ಪ್ರದೇಶದ ಖಾತೆದಾರರು 1 ಸಾವಿರ ಕನಿಷ್ಟ ತಿಂಗಳ ಬ್ಯಾಲೆನ್ಸ್ ಹೊಂದಿರಬೇಕು.

ಇನ್ನು ಬ್ಯಾಲೆನ್ಸ್ ನಲ್ಲಿನ ಶೇಕಡಾವಾರು ಕೊರತೆಗನುಸಾರ ಮೆಟ್ರೋ ಮತ್ತು ಪಟ್ಟಣ ಪ್ರದೇಶದಲ್ಲಿ 10 ರಿಂದ 15 ರೂ. ವರೆಗೆ, ಅರೆಪಟ್ಟಣ ಪ್ರದೇಶದಲ್ಲಿ 7.50 ರಿಂದ 12 ರೂ. ಗಳ ವರೆಗೆ, ಗ್ರಾಮೀಣ ಪ್ರದೇಶದಲ್ಲಿ 5 ರಿಂದ 10 ರೂ. ವರೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದಂಡ ವಿಧಿಸಲಿದೆ. ಜೊತೆಗೆ ಅದಕ್ಕೆ ಹೆಚ್ಚುವರಿಯಾಗಿ ಜಿ.ಎಸ್‍.ಟಿ.ಯನ್ನು ವಿಧಿಸಲಿದೆ.

ಮೆಟ್ರೋ ಮತ್ತು ನಗರ ಪ್ರದೇಶ ವಿಧಿಸಲಾಗುವ ದಂಡ
Shortfall <= 50% Rs. 10 + GST
Shortfall > 50-75% Rs. 12 + GST
Shortfall > 75% Rs. 15 + GST
ಅರೆ ಪಟ್ಟಣ ಪ್ರದೇಶ
Shortfall <= 50% Rs. 7.50 + GST
Shortfall > 50-75% Rs. 10 + GST
Shortfall > 75% Rs.12 + GST
ಗ್ರಾಮೀಣ ಪ್ರದೇಶ 
Shortfall <= 50% Rs. 5 + GST
Shortfall > 50-75% Rs. 7.50 + GST
Shortfall > 75% Rs. 10 + GST

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಿನಿಮಮ್ ಬ್ಯಾಲೆನ್ಸ್ ವಿವರ

ಬ್ರಾಂಚ್ ವಿವರ ಮಿನಿಮಮ್ ಬ್ಯಾಲೆನ್ಸ್ ಮೊತ್ತ
ಮೆಟ್ರೋ 3,000 ರೂ.
ಅರ್ಬನ್ 3,000 ರೂ.
ಸೆಮಿ ಅರ್ಬನ್ 2,000 ರೂ.
ಗ್ರಾಮೀಣ ಪ್ರದೇಶ 1,000 ರೂ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...