alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಯೋ ಫೀಚರ್ ಫೋನ್ ಗ್ರಾಹಕರಿಗೊಂದು ಖುಷಿ ಸುದ್ದಿ

ಜಿಯೋ ಫೋನ್ ನಿರೀಕ್ಷೆಯಲ್ಲಿರುವ ಗ್ರಾಹಕರಿಗೊಂದು ಖುಷಿ ಸುದ್ದಿ. ಮುಂಗಡ ಬುಕ್ಕಿಂಗ್ ಮಾಡಿದ್ದ ಗ್ರಾಹಕರ ಕೈಗೆ ಈ ವಾರಾಂತ್ಯದಲ್ಲಿ ಜಿಯೋ 4ಜಿ ಫೀಚರ್ ಫೋನ್ ಸಿಗಲಿದೆ. ಮೂಲಗಳ ಪ್ರಕಾರ ಅಕ್ಟೋಬರ್ 1ರಂದು ಜಿಯೋ ತನ್ನ ಫೀಚರ್ ಫೋನ್ ಡಿಲೆವರಿ ಶುರು ಮಾಡಲಿದೆ.

ಉಚಿತವಾಗಿ ಸಿಗ್ತಿರುವ ಜಿಯೋ ಫೀಚರ್ ಫೋನ್ ಮುಂದಿನ ಬುಕ್ಕಿಂಗ್ ಕೂಡ ಇದೇ ವಾರಾಂತ್ಯದಲ್ಲಿ ಶುರುವಾಗಲಿದೆ ಎನ್ನಲಾಗ್ತಿದೆ. ಮೊದಲ ಬಾರಿ ರಿಲಾಯನ್ಸ್ ಜಿಯೋ 4ಜಿ ಫೀಚರ್ ಫೋನ್ ಉಚಿತ ಬುಕ್ಕಿಂಗನ್ನು ಆಗಸ್ಟ್ 24ರಂದು ಶುರುಮಾಡಿತ್ತು. ಸಂಜೆ 5.30ಕ್ಕೆ ಆರಂಭವಾಗಿದ್ದ ಉಚಿತ ಬುಕ್ಕಿಂಗ್ ಆಗಸ್ಟ್ 26ರಂದು ಮುಕ್ತಾಯಗೊಂಡಿತ್ತು. 6 ಮಿಲಿಯನ್ ಗೂ ಹೆಚ್ಚು ಮೊಬೈಲ್ ಬುಕ್ ಆಗಿದೆ.

ಮುಂಗಡ ಬುಕ್ಕಿಂಗ್ ಮಾಡಿದ ಗ್ರಾಹಕರಿಗೆ ಮೊಬೈಲ್ ನೀಡಿದ ನಂತ್ರ ಮತ್ತೆ ಆರ್ಡರ್ ಪಡೆಯಲು ಜಿಯೋ ನಿರ್ಧರಿಸಿದೆ. ಹಾಗಾಗಿ ಬುಕ್ಕಿಂಗ್ ರದ್ದು ಮಾಡಿದೆ. ಮುಂದಿನ 6 ತಿಂಗಳಲ್ಲಿ 10-15 ಮಿಲಿಯನ್ ಫೋನ್ ಮಾರಾಟ ಮಾಡುವ ಗುರಿಯನ್ನು ಜಿಯೋ ಹೊಂದಿದೆ. ವರ್ಷದಲ್ಲಿ ಇದ್ರ ಸಂಖ್ಯೆ 40 ಮಿಲಿಯನ್ಗೇರುವ ಸಾಧ್ಯತೆಯಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...