alex Certify
ಕನ್ನಡ ದುನಿಯಾ       Mobile App
       

Kannada Duniya

ಮಾರುಕಟ್ಟೆಗೆ ಬರಲಿದೆ ನೋಕಿಯಾ 216

microsoft-launches-nokia-216-feature-phone-with-slfie-flash_

ಮೈಕ್ರೋಸಾಫ್ಟ್ ಭಾರತದಲ್ಲಿ 2,495 ರೂ. ಬೆಲೆಯ ನೋಕಿಯಾ 216 ಫೋನ್ ಲಾಂಚ್ ಮಾಡಲಿದೆ. ಈ ಫೋನಿನ ಬಾಡಿ ಪಾಲಿಕಾರ್ಬನೇಟೆಡ್ ಶೆಲ್ ನಿಂದ ಆವೃತವಾಗಿದ್ದು, ಇದು ಅಕ್ಟೋಬರ್ 24 ರಿಂದ ಲಭ್ಯವಾಗಲಿದೆ.

ನೋಕಿಯಾ 216 ಮೊಬೈಲ್ ನಲ್ಲಿ 2.4 ಇಂಚಿನ ವಿಜಿಎ ಸ್ಕ್ರೀನ್ ಮತ್ತು ಎಲ್ ಇ ಡಿ ಫ್ಲ್ಯಾಶ್ ಉಳ್ಳ 0.3 ಮೆಗಾಫಿಕ್ಸೆಲ್ ರಿಯರ್, ಫ್ರಂಟ್ ಕ್ಯಾಮರಾ ಸೌಲಭ್ಯವಿದೆ. ಇದರಲ್ಲಿ 1020 ಎಮ್ಎಎಚ್ ಸಾಮರ್ಥ್ಯದ ಬ್ಯಾಟರಿ ಇರಲಿದೆ. ಇದು 18 ಗಂಟೆಗಳ ಟಾಕ್ ಟೈಮ್ ಮತ್ತು 19 ದಿನಗಳ ಸ್ಟೇ ಬೈ ಬ್ಯಾಕ್ ಅಪ್ ಕೊಡಲಿದೆ ಎಂದು ಕಂಪನಿ ಹೇಳಿದೆ.

ನೋಕಿಯಾ ಸಿರೀಸ್ ನ 30+ ಆಪರೇಟಿಂಗ್ ಸಿಸ್ಟಂ ನಲ್ಲಿ ಇದು ಕಾರ್ಯ ನಿರ್ವಹಿಸಲಿದ್ದು, 3.5 ಎಂಎಂ ಸಾಮರ್ಥ್ಯದ ಹೆಡ್ ಫೋನ್ ಜ್ಯಾಕ್ ಕೂಡ ನೀಡಲಾಗುತ್ತಿದೆ. ಇದರೊಂದಿಗೆ ಕಂಪನಿ ಒಂದು ವರ್ಷದ ತನಕ ಪ್ರತೀ ತಿಂಗಳು ಗೇಮ್ ಲಾಫ್ಟ್ ನ ಒಂದು ಉಚಿತ ಗೇಮ್ ನೀಡಲಿದೆ. ಇದಕ್ಕಾಗಿ ಬಳಕೆದಾರರು ಒಪೇರಾ ಗೇಮ್ ಸ್ಟೋರ್ ಅನ್ನು ಬಳಕೆ ಮಾಡಬೇಕಾಗುತ್ತದೆ. ಈ ಎಲ್ಲ ಸೌಲಭ್ಯ ಹೊಂದಿರುವ ನೋಕಿಯಾ 216 ಕಪ್ಪು, ನೀಲಿ ಮತ್ತು ಬೂದು ಬಣ್ಣಗಳಲ್ಲಿ ಸಿಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...