alex Certify
ಕನ್ನಡ ದುನಿಯಾ       Mobile App
       

Kannada Duniya

ಷೇರು ಮಾರಾಟದಿಂದ ಸತ್ಯಾ ನಾದೆಲ್ಲಾರಿಗೆ ಸಿಕ್ಕ ಹಣವೆಷ್ಟು ಗೊತ್ತಾ…?

ಮೈಕ್ರೋಸಾಫ್ಟ್ ಕಂಪನಿಯ ಸಿ.ಇ.ಒ. ಸತ್ಯಾ ನಾದೆಲ್ಲಾ ತಮ್ಮ ಬಳಿಯಿದ್ದ ಪ್ರತಿಶತ 30 ರಷ್ಟು ಷೇರುಗಳನ್ನು ಮಾರಾಟ ಮಾಡಿದ್ದಾರೆ. ಅಂದ ಹಾಗೆ ಈ ಷೇರು ಮಾರಾಟದಿಂದ ಸತ್ಯಾರಿಗೆ ಎಷ್ಟು ಹಣ ಬಂದಿದೆ ಎಂದು ತಿಳಿದ್ರೆ, ನೀವು ದಂಗಾಗ್ತೀರಾ.

2014ರಲ್ಲಿ ಮೈಕ್ರೋಸಾಫ್ಟ್ ಸಿ.ಇ.ಒ. ಆಗಿ ಭಾರತೀಯ ಮೂಲದ ಸತ್ಯಾ ಅಧಿಕಾರ ವಹಿಸಿಕೊಂಡ್ರು. ಅಲ್ಲಿಂದ ಈವರೆಗೆ ಸುಮಾರು 11 ಲಕ್ಷ ಷೇರುಗಳನ್ನು ಹೊಂದಿದ್ದಾರೆ. ತಮ್ಮ ಒಟ್ಟು ಷೇರಿನ ಮೂರನೇ ಒಂದರಷ್ಟು ಭಾಗವನ್ನು ಸತ್ಯಾ ನಾದೆಲ್ಲಾ ಗರಿಷ್ಠ ಬೆಲೆಗೆ ಮಾರಾಟ ಮಾಡಿದ್ದಾರೆ.

ನಾದೆಲ್ಲಾ 3.28 ಲಕ್ಷ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಪ್ರತಿ ಷೇರು ಮೌಲ್ಯ 109 ರಿಂದ 110 ಡಾಲರ್ ಆಗಿದೆ. ನಾದೆಲ್ಲಾ ತಮ್ಮ ಷೇರುಗಳನ್ನು ಮಾರಿ ಸುಮಾರು 241 ಕೋಟಿ ರೂಪಾಯಿ ಪಡೆದಿದ್ದಾರೆಂದು ತಿಳಿದು ಬಂದಿದೆ. ವೈಯಕ್ತಿಕ ಹಣಕಾಸು ಯೋಜನೆಗೆ ಷೇರುಗಳ ಮಾರಾಟ ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ. ಸತ್ಯ ನಾದೆಲ್ಲಾ ಬಳಿ ಇನ್ನೂ 778,596 ಷೇರುಗಳಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...