alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಸ ಬಾಂಬ್ ಸಿಡಿಸಿದ ವಿಜಯ್ ಮಲ್ಯ: ವಿದೇಶಕ್ಕೆ ಪಲಾಯನ ಮಾಡುವ ಮುನ್ನ ಹಣಕಾಸು ಸಚಿವರನ್ನು ಭೇಟಿ ಮಾಡಿದ್ದರೆ…?

ಭಾರತದಿಂದ ಹೊರಡುವ ಮುನ್ನ ನಾನು ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರ ಜತೆ ಮಾತುಕತೆ ನಡೆಸಿದ್ದೆ ಎಂದು ಬಹುಕೋಟಿ ರೂ. ವಂಚನೆ ಆರೋಪ ಎದುರಿಸುತ್ತಿರುವ ಮದ್ಯದ ದೊರೆ ವಿಜಯ್‌ ಮಲ್ಯ ಹೇಳಿಕೆ ನೀಡಿದ್ದಾರೆ.

ಲಂಡನ್‌ನಲ್ಲಿ ಮಲ್ಯ ವಿರುದ್ಧ ನಡೆಯುತ್ತಿರುವ ವಂಚನೆ ಪ್ರಕರಣದ ವಿಚಾರಣೆಗೆ ಹಾಜರಾಗಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತದಿಂದ ಲಂಡನ್‌ಗೆ ಹೊರಡುವ ಮುನ್ನ ಸಾಲದ ವಿಚಾರವಾಗಿ ಉಂಟಾಗಿದ್ದ ಸಮಸ್ಯೆಯನ್ನು ಬಗೆಹರಿಸುವ ಸಂಬಂಧ ಅರುಣ್‌ ಜೇಟ್ಲಿ ಜತೆ ಮಾತನಾಡಿದ್ದೆ. ನಾನು ಬ್ಯಾಂಕ್‌ಗಳಿಗೆ ಸಲ್ಲಿಸಿದ್ದ ಮನವಿಗಳನ್ನು ಬ್ಯಾಂಕ್‌ ತಿರಸ್ಕರಿಸಿತ್ತು ಎಂದು ಹೇಳಿದ್ದಾರೆ.

ದೇಶದ ವಿವಿಧ ಭಾಗದಲ್ಲಿರುವ ಆಸ್ತಿ, ವಾಣಿಜ್ಯ ಕಟ್ಟಡಗಳನ್ನು ನ್ಯಾಯಾಂಗದ ಸಹಾಯದೊಂದಿಗೆ ಮಾರಾಟ ಮಾಡಿ, ಸಾಲಗಳನ್ನು ತೀರಿಸಬಹುದು. ಇವುಗಳ ಒಟ್ಟು ಮೌಲ್ಯ 13,900 ಕೋಟಿ ರೂ. ಬೆಲೆ ಬಾಳುತ್ತೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ಹೇಳಿರುವುದಾಗಿ ಅವರು ತಿಳಿಸಿದ್ದಾರೆ.

ಎಲ್ಲ ಬ್ಯಾಂಕ್‌ ಜತೆ ಮಾತುಕತೆ ನಡೆಸಿ, ಸಾಲದ ವಿಚಾರದಲ್ಲಿ ಆಗಿರುವ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಮುಂದಾಗಿದ್ದೆ. ನ್ಯಾಯಾಲಯಕ್ಕೂ ಈ ಬಗ್ಗೆ ಮಾಹಿತಿ ನೀಡಿದ್ದಾಗಿ ಹೇಳಿಕೆ ನೀಡಿದ್ದಾರೆ.

ವಿಜಯ್‌ ಮಲ್ಯ ಅವರ ಗಡೀಪಾರು ಸಂಬಂಧ ಲಂಡನ್‌ನಲ್ಲಿ 2017 ಡಿಸೆಂಬರ್‌ 4 ರಿಂದ ವಿಚಾರಣೆ ಆರಂಭವಾಗಿತ್ತು. ಮಂಗಳವಾರ ಅವರು ವೆಸ್ಟ್‌ಮಿನಿಸ್ಟರ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ ಹಾಜರಾಗಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...