alex Certify
ಕನ್ನಡ ದುನಿಯಾ       Mobile App
       

Kannada Duniya

ವಾಟ್ಸಾಪ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್

ಫೇಸ್ಬುಕ್ ಡೇಟಾ ವಿವಾದ ಇನ್ನೂ ತಣ್ಣಗಾಗಿಲ್ಲ ಆಗ್ಲೇ ವಾಟ್ಸಾಪ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್ ಬಂದಿದೆ. ಫೇಸ್ಬುಕ್ ನಂತೆ ವಾಟ್ಸಾಪ್ ಕೂಡ ಬಳಕೆದಾರರ ಮಾಹಿತಿಯನ್ನು ಕಲೆ ಹಾಕ್ತಿದೆಯಂತೆ. ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಾಟ್ಸಾಪ್ ಬಳಕೆದಾರರ ಕೆಲ ಡೇಟಾಗಳನ್ನು ಸಂಗ್ರಹಿಸುವುದಾಗಿ ಒಪ್ಪಿಕೊಂಡಿದೆ.

ವಿಶ್ವದ ಜನಪ್ರಿಯ ಮೆಸ್ಸೇಜಿಂಗ್ ಅಪ್ಲಿಕೇಷನ್ ವಾಟ್ಸಾಪ್ ಅಪ್ಲಿಕೇಷನ್ ಬಳಕೆದಾರರಿಗೆ ಸುರಕ್ಷಿತವಲ್ಲ ಎಂಬುದು ಸಾಬೀತಾಗಿದೆ. ಇಸ್ರೇಲ್ ನಲ್ಲಿ ಫೇಸ್ಬುಕ್ ಹಾಗೂ ವಾಟ್ಸಾಪ್ ಎರಡಕ್ಕೂ ಒಂದೇ ಸರ್ವರ್ ಬಳಸಲಾಗ್ತಿದೆ ಎಂಬ ಸುದ್ದಿ ಬಂದಿತ್ತು.

ವಾಸ್ತವವಾಗಿ ವಾಟ್ಸಾಪ್  ಎಂಡ್ ಟು ಎಂಡ್ ಎನ್ಕ್ರಿಪ್ಶನ್ನಲ್ಲಿ ಬಳಕೆದಾರರ ಭದ್ರತೆಯನ್ನು ನೀಡುತ್ತದೆ. ಇಬ್ಬರ ನಡುವಿನ ಮಾತುಕತೆ, ವಿಡಿಯೋ, ಚಿತ್ರಗಳಲ್ಲಿ ಮೂರನೇಯವನ ಪ್ರವೇಶ ಸಾಧ್ಯವಿರಲಿಲ್ಲ. ಹಾಗಾಗಿ ವಾಟ್ಸಾಪ್ ಸುರಕ್ಷಿತ ಎಂದು ನಂಬಲಾಗಿತ್ತು. ಗ್ರೂಪ್ ಚಾಟ್ ನಲ್ಲಿ ಎಂಡ್ ಟು ಎಂಡ್  ಎನ್ಕ್ರಿಪ್ಶನ್ ನೀಡುವುದಿಲ್ಲ. ಇದು ಬಳಕೆದಾರರ ಗೌಪ್ಯತೆಗೆ ಧಕ್ಕೆಯುಂಟಾಗುತ್ತದೆ. ಅಂದ್ರೆ ಡೇಟಾ ಕಳ್ಳತನವಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಡೇಟಾ ಸುರಕ್ಷತೆಯಲ್ಲಿ ಇದು ಫೇಸ್ಬುಕ್ ಗಿಂತ ಭಿನ್ನವಾಗಿದೆ ಎಂದು ನಂಬಲಾಗಿತ್ತು. ಆದ್ರೆ ಈಗ ವಾಟ್ಸಾಪ್ ಖುದ್ದು ಡೇಟಾ ಸಂಗ್ರಹಿಸುವುದಾಗಿ ಹೇಳಿಕೆ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...