alex Certify
ಕನ್ನಡ ದುನಿಯಾ       Mobile App
       

Kannada Duniya

EPFO ಸದಸ್ಯರಿಗೆ ಸಿಗಲಿದೆ ಹೊಸ ಸೌಲಭ್ಯ

ನಿವೃತ್ತಿ ನಿಧಿ ಸಂಸ್ಥೆ EPFO ತನ್ನ 4.5 ಕೋಟಿ ಸದಸ್ಯರಿಗಾಗಿ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಅದರ ಪ್ರಕಾರ UAN ಸಂಖ್ಯೆಯ ಮೂಲಕ ನಿಮ್ಮ ಎಲ್ಲಾ ಪ್ರೊವಿಡೆಂಟ್ ಫಂಡ್ ಖಾತೆಗಳನ್ನು ವಿಲೀನ ಮಾಡಬಹುದಾಗಿದೆ. EPFO ಚಂದಾದಾರರು ಒಟ್ಟು 10 ಖಾತೆಗಳನ್ನು ವಿಲೀನ ಮಾಡಲು ಅವಕಾಶವಿದೆ.

ಸದ್ಯ EPFO ಚಂದಾದಾರರು UAN ಬಳಸಿಕೊಂಡು ಆನ್ ಲೈನ್ ನಲ್ಲಿ ಪ್ರತ್ಯೇಕವಾಗಿ ಟ್ರಾನ್ಸಫರ್ ಕ್ಲೇಮ್ ಮಾಡಬೇಕಿದೆ. ಆದ್ರೆ ಹೊಸ ನಿಯಮದಲ್ಲಿ ಅದರ ಅಗತ್ಯವಿರುವುದಿಲ್ಲ. ತಮ್ಮ ತಮ್ಮ UAN ಆ್ಯಕ್ಟಿವೇಟ್ ಮಾಡಿಕೊಂಡಲ್ಲಿ, ಅದು ಬ್ಯಾಂಕ್ ಖಾತೆಗಳೊಂದಿಗೆ ಲಿಂಕ್ ಆಗಿರುತ್ತದೆ.

ಆಧಾರ್ ಮತ್ತು ಪ್ಯಾನ್ ವಿವರ ಕೂಡ ಲಭ್ಯವಿರುತ್ತದೆ. ಹಾಗಾಗಿ ಹೊಸ ಸೌಲಭ್ಯದ ಲಾಭ ಪಡೆಯುವಂತೆ ಸರ್ಕಾರ ಸೂಚಿಸಿದೆ. ಈಗಾಗ್ಲೇ 120ಕ್ಕೂ ಹೆಚ್ಚು EPFO ಕಚೇರಿಗಳಿಗೆ ಅತಿ ಶೀಘ್ರದಲ್ಲಿ ಈ ಸೌಲಭ್ಯ ಅಳವಡಿಸುವಂತೆ ನಿರ್ದೇಶನವನ್ನೂ ನೀಡಲಾಗಿದೆ.

EPFO ಸದಸ್ಯರು ತಮ್ಮ ಆಕ್ಟಿವೇಟೆಡ್ UAN ಸಂಖ್ಯೆ, ಮೆಂಬರ್ ಐಡಿ, UAN ಪೋರ್ಟಲ್ ನೊಂದಿಗೆ ನೋಂದಣಿಯಾಗಿರುವ ಮೊಬೈಲ್ ನಂಬರ್ ಅನ್ನು ಸಲ್ಲಿಸಬೇಕು. EPFO ವೆಬ್ ಸೈಟ್ ಮೂಲಕವೂ ಹೊಸ ಸೌಲಭ್ಯವನ್ನು ಪಡೆದುಕೊಳ್ಳಬಹುದು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...