alex Certify ಇಲ್ಲಿದೆ ಭಾರತದ ಅತಿ ಸಿರಿವಂತ ಕುಟುಂಬದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಭಾರತದ ಅತಿ ಸಿರಿವಂತ ಕುಟುಂಬದ ಮಾಹಿತಿ

ಭಾರತದ ಅತಿ ದೊಡ್ಡ ಸಿರಿವಂತ ವ್ಯಕ್ತಿಯಾಗಿ ಫೋರ್ಬ್ಸ್ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ನ ಮುಕೇಶ್ ಅಂಬಾನಿ ಸತತವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ದಿನದಿಂದ ದಿನಕ್ಕೆ ಅವರ ಸಂಪತ್ತಿನಲ್ಲಿ ಏರಿಕೆಯಾಗುತ್ತಲೇ ಇದ್ದು, ಭಾರತದ ಅತಿ ಸಿರಿವಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ಮುಕೇಶ್ ಅಂಬಾನಿ ಕುಟುಂಬದ ಐಷಾರಾಮಿ ಬದುಕಿನ ಬಗ್ಗೆ ಹಲವು ದಂತಕಥೆಗಳಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಅಂತೆಕಂತೆಗಳು ಹರಿದಾಡುತ್ತಿರುತ್ತವೆ. ಮುಂಬೈನಲ್ಲಿರುವ ಮುಕೇಶ್ ಅಂಬಾನಿಯವರ ‘ಅಂಟಿಲ್ಲಾ’ ನಿವಾಸ ವಿಶ್ವದ ಅತಿ ದುಬಾರಿ ಮನೆಗಳಲ್ಲೊಂದು ಎಂಬ ಕೀರ್ತಿಗೆ ಭಾಜನವಾಗಿದೆ.

ಮುಕೇಶ್ ಅಂಬಾನಿ ಮತ್ತವರ ಪತ್ನಿ ನೀತಾ ಅಂಬಾನಿಯವರ ಕುರಿತಾಗಿ ಇರುವಷ್ಟೇ ಕುತೂಹಲ ಅವರ ಮಕ್ಕಳ ಬಗ್ಗೆಯೂ ಇದ್ದು, ಅದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ. ಮುಕೇಶ್ ಅಂಬಾನಿ ದಂಪತಿಗಳಿಗೆ ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯಿದ್ದು, ಈ ಪೈಕಿ ಇಷಾ ಅಂಬಾನಿ ಹಾಗೂ ಆಕಾಶ್ ಅಂಬಾನಿ ರಿಲಯನ್ಸ್ ಇಂಡಸ್ಟ್ರೀಸ್ ನ ನಿರ್ದೇಶಕರಾಗಿದ್ದಾರೆ. ಇಷಾ ಅಂಬಾನಿ, ಯಾಲೆ ವಿಶ್ವವಿದ್ಯಾನಿಲಯದ ಪದವೀಧರೆಯಾಗಿದ್ದರೆ, ಆಕಾಶ್ ಅಂಬಾನಿ ಬ್ರೌನ್ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿದ್ದಾರೆ. ಮುಕೇಶ್ ಅಂಬಾನಿಯವರ ಕಿರಿಯ ಪುತ್ರ ಅನಂತ್ ಅಂಬಾನಿ ಅಮೆರಿಕಾದಲ್ಲಿ ವ್ಯಾಸಂಗ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...