alex Certify
ಕನ್ನಡ ದುನಿಯಾ       Mobile App
       

Kannada Duniya

ಇಳಿಕೆಯಾಗಲಿದೆ ಔಷಧಗಳ ದರ..?

medicie

ನವದೆಹಲಿ: ಹೃದಯ ಶಸ್ತ್ರ ಚಿಕಿತ್ಸೆಯ ವೆಚ್ಚ, ಸ್ಟೆಂಟ್ ಬೆಲೆ ಇಳಿಕೆ ಮಾಡುವ ಮೂಲಕ ರೋಗಿಗಳಿಗೆ ಅನುಕೂಲ ಕಲ್ಪಿಸಿದ್ದ ಕೇಂದ್ರ ಸರ್ಕಾರ ಇತ್ತೀಚೆಗೆ ಮತ್ತೊಂದು ಕ್ರಮ ಕೈಗೊಂಡಿತ್ತು.

ಮಂಡಿ ಶಸ್ತ್ರ ಚಿಕಿತ್ಸೆಯ ಸಲಕರಣೆ ಮತ್ತು ಶಸ್ತ್ರ ಚಿಕಿತ್ಸೆಗೆ ದರದ ಮಿತಿ ವಿಧಿಸಿ. ಶೇ. 70 ರಷ್ಟು ವೆಚ್ಚವನ್ನು ಕಡಿತಗೊಳಿಸಲಾಗಿದೆ.

ನಂತರದ ಬೆಳವಣಿಗೆಯಾಗಿ ಇತರೆ ಔಷಧ, ಶಸ್ತ್ರ ಚಿಕಿತ್ಸೆ ಮತ್ತು ವೈದ್ಯಕೀಯ ಸಲಕರಣೆಗಳ ಮೇಲೆ ದರ ಮಿತಿಯನ್ನು ವಿಧಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ.

ಅಲೈಯನ್ಸ್ ಆಫ್ ಡಾಕ್ಟರ್ಸ್ ಫಾರ್ ಎಥಿಕಲ್ ಹೆಲ್ತ್ ಕೇರ್ ಈ ಕುರಿತಾಗಿ ರಾಷ್ಟ್ರೀಯ ಔಷಧ ದರ ಪ್ರಾಧಿಕಾರಕ್ಕೆ ವರದಿಯನ್ನು ಸಲ್ಲಿಸಿದ್ದು, ವಿವಿಧ ಶಸ್ತ್ರ ಚಿಕಿತ್ಸೆ ಮತ್ತು ವೈದ್ಯಕೀಯ ಸಲಕರಣೆಗಳ ವೆಚ್ಚಗಳ ಕುರಿತಾಗಿ ತಿಳಿಸಲಾಗಿದೆ.

ವೈದ್ಯಕೀಯ ದರಗಳ ಪರಿಶೀಲನೆಗೆ ಕೇಂದ್ರ ಸರ್ಕಾರ ಉನ್ನತಮಟ್ಟದ ಸಮಿತಿಯನ್ನು ರಚಿಸಿದ್ದು, ಔಷಧಗಳ ದರದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಮಾಡುವಂತೆ ಸಮಿತಿ ಶಿಫಾರಸು ಮಾಡಿದೆ.

ಆ ಸಮಿತಿ ನೀಡಿದ ವರದಿಯನ್ನು ಬಹಿರಂಗಪಡಿಸಬೇಕೆಂದು ಅಲೈಯನ್ಸ್ ಆಫ್ ಡಾಕ್ಟರ್ಸ್ ಫಾರ್ ಎಥಿಕಲ್ ಹೆಲ್ತ್ ಕೇರ್ ಒತ್ತಾಯಿಸಿದೆ. ಔಷಧ, ವೈದ್ಯಕೀಯ ಸಲಕರಣೆಗಳ ವೆಚ್ಚಗಳನ್ನು ಕೂಡ ಕಡಿಮೆ ಮಾಡಬೇಕೆಂದು ಸಲಹೆ ನೀಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...