alex Certify
ಕನ್ನಡ ದುನಿಯಾ       Mobile App
       

Kannada Duniya

ನಾಳೆ-ನಾಡಿದ್ದು ಬ್ಯಾಂಕ್ ಬಂದ್

ಸರ್ಕಾರಿ ಬ್ಯಾಂಕ್ ನಲ್ಲಿ ಕೆಲಸವಿದ್ರೆ ಇಂದೇ ಮುಗಿಸಿಕೊಳ್ಳಿ. ನಾಳೆ ಅಂದ್ರೆ ಮೇ.30 ಹಾಗೂ ಮೇ.31ರಂದು ಬ್ಯಾಂಕ್ ಗಳ ಬಾಗಿಲು ಮುಚ್ಚಲಿವೆ. ಸರ್ಕಾರಿ ಬ್ಯಾಂಕ್ ನೌಕರರು ದೇಶದಾದ್ಯಂತ ಪ್ರತಿಭಟನೆ ನಡೆಸಲಿದ್ದು, ಬ್ಯಾಂಕಿಂಗ್ ವ್ಯವಸ್ಥೆ ಮೇಲೆ ಇದು ಕೆಟ್ಟ ಪರಿಣಾಮ ಬೀರುವ ಸಾಧ್ಯತೆಯಿದೆ.

ಸಂಬಳವನ್ನು ಶೇಕಡಾ 2ರಷ್ಟು ಏರಿಕೆ ಮಾಡಲು ಮುಂದಾಗಿರುವ ಪ್ರಸ್ತಾವವನ್ನು ವಿರೋಧಿಸಿ ಬ್ಯಾಂಕ್ ಸಿಬ್ಬಂದಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಬ್ಯಾಂಕ್ ಯೂನಿಯನ್ ಪ್ರಕಾರ, ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ಸಂಬಳದಲ್ಲಿ ಶೇಕಡಾ 2ರಷ್ಟು ಏರಿಕೆ ಮಾಡುವ ಪ್ರಸ್ತಾವ ಮುಂದಿಟ್ಟಿದೆ. ಮೇ.5ರಂದು ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಇದನ್ನು ಬ್ಯಾಂಕ್ ಯೂನಿಯನ್ ವಿರೋಧ ಮಾಡಿದೆ. ಬ್ಯಾಂಕ್ ಗಳಿಗೆ ನಷ್ಟವಾಗಿರುವುದು ಎನ್ ಪಿ ಎ ನಿಂದ. ಇದ್ರಲ್ಲಿ ಬ್ಯಾಂಕ್ ಸಿಬ್ಬಂದಿ ತಪ್ಪೇನಿಲ್ಲ. ಕಳೆದ ವರ್ಷ ಬ್ಯಾಂಕ್ ಸಿಬ್ಬಂದಿ ನೋಟು ನಿಷೇಧ, ಅಟಲ್ ಪಿಂಚಣಿ ಯೋಜನೆ, ಮುದ್ರಾ ಯೋಜನೆ ಸೇರಿದಂತೆ ಅನೇಕ ಕೆಲಸಗಳಲ್ಲಿ  ಬ್ಯುಸಿಯಾಗಿದ್ದು, ಸಿಬ್ಬಂದಿ ಮೇಲೆ ಸಾಕಷ್ಟು ಕೆಲಸದ ಹೊಣೆ ಬಿದ್ದಿದೆ. ಇಷ್ಟು ಕೆಲಸ ಮಾಡಿದ ಸಿಬ್ಬಂದಿಗೆ ಕೇವಲ ಶೇಕಡಾ 2ರಷ್ಟು ಸಂಬಳ ಹೆಚ್ಚಳ ಮಾಡುವುದು ಎಷ್ಟು ಸರಿ ಎಂದು ಬ್ಯಾಂಕ್ ನೌಕರರು ಪ್ರಶ್ನೆ ಮಾಡಿದ್ದಾರೆ. ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...