alex Certify
ಕನ್ನಡ ದುನಿಯಾ       Mobile App
       

Kannada Duniya

ಉದ್ಯೋಗಸ್ಥ ಮಹಿಳೆಯರಿಗೊಂದು ‘ಗುಡ್ ನ್ಯೂಸ್’

ಕೇಂದ್ರ ಸರ್ಕಾರ, ಉದ್ಯೋಗಸ್ಥ ಮಹಿಳೆಯರಿಗೆ ನೆಮ್ಮದಿಯ ಸುದ್ದಿಯೊಂದನ್ನು ನೀಡಿದೆ. ಉದ್ಯೋಗಸ್ಥ ಮಹಿಳೆಯರು, ಗರ್ಭಿಣಿಯರಾದ ಸಂದರ್ಭದಲ್ಲಿ ಈ ಹಿಂದೆ ನೀಡಲಾಗುತ್ತಿದ್ದ 12 ವಾರಗಳ ಕಾಲದ ವೇತನ ಸಹಿತ ರಜೆಯನ್ನು ಈಗಾಗಲೇ 26 ವಾರಗಳಿಗೆ ವಿಸ್ತರಿಸಲಾಗಿದ್ದು, ಈಗ ಮತ್ತೊಂದು ಪ್ರಮುಖ ನಿರ್ಧಾರ ಕೈಗೊಳ್ಳಲು ಸರ್ಕಾರ ಮುಂದಾಗಿದೆ.

15 ಸಾವಿರ ರೂ. ಒಳಗಿನ ವೇತನ ಪಡೆಯುತ್ತಿರುವ ಹಾಗೂ ಕನಿಷ್ಟ ಒಂದು ವರ್ಷಗಳಿಂದ ಇ.ಪಿ.ಎಫ್.ಓ. ಸೌಲಭ್ಯ ಹೊಂದಿರುವ ಮಹಿಳೆಯರಿಗೆ ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಈ ಯೋಜನೆ ಅನ್ವಯವಾಗಲಿದ್ದು, ಹೆಚ್ಚುವರಿ 14 ವಾರಗಳ ವೇತನ ಸಹಿತ ರಜೆ ಪಡೆಯುವ ಗರ್ಭಿಣಿ ಮಹಿಳೆಯರ ವೇತನದ ಪೈಕಿ ಕೇಂದ್ರ ಸರ್ಕಾರ 7 ವಾರಗಳ ವೇತನವನ್ನು ಭರಿಸಲು ನಿರ್ಧರಿಸಿದೆ. ಉಳಿದ 7 ವಾರಗಳ ವೇತನವನ್ನು ಉದ್ಯೋಗದಾತ ಭರಿಸಬೇಕಾಗುತ್ತದೆ.

ಇದು ಕಾರ್ಯಗತಗೊಂಡಲ್ಲಿ ಸರ್ಕಾರಕ್ಕೆ ವಾರ್ಷಿಕ 400 ಕೋಟಿ ರೂ. ವೆಚ್ಚ ಬರಲಿದೆ ಎಂದು ಹೇಳಲಾಗಿದ್ದು, ಕೇಂದ್ರ ಕಾರ್ಮಿಕ ಸಚಿವಾಲಯ ಈ ಕುರಿತ ಪ್ರಸ್ತಾವನೆಯನ್ನು ಸಲ್ಲಿಸಿದೆ. ಹಣಕಾಸು ಸಚಿವಾಲಯದ ಅನುಮತಿ ದೊರೆತ ಬಳಿಕ ಜಾರಿಗೆ ಬರುವ ಸಾಧ್ಯತೆ ಇದೆ. ಇದರಿಂದಾಗಿ ಉದ್ಯೋಗಸ್ಥ ಗರ್ಭಿಣಿ ಮಹಿಳೆಯರು ಈ ಅವಧಿ ಬಳಿಕ ಕೆಲಸ ಕಳೆದುಕೊಳ್ಳುವ ಭೀತಿ ದೂರವಾಗುವ ನಿರೀಕ್ಷೆ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...