alex Certify
ಕನ್ನಡ ದುನಿಯಾ       Mobile App
       

Kannada Duniya

ಗುಡ್ ನ್ಯೂಸ್: 2019 ರ ಮಾರ್ಚ್ ವೇಳೆಗೆ ಸಿದ್ದವಾಗಲಿವೆ 75 ಲಕ್ಷ ಮನೆಗಳು

ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ 2019 ರ ಮಾರ್ಚ್ ಒಳಗೆ 75 ಲಕ್ಷ ಮನೆ ನಿರ್ಮಾಣ ಮಾಡಲು ಗುರಿ ಹೊಂದಲಾಗಿದೆ ಎಂದು ತಿಳಿದು ಬಂದಿದೆ. ಕಳೆದ ವರ್ಷ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯ ಸುಮಾರು 30.6 ಲಕ್ಷ ಮನೆಗಳನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದೆ.

ಅದರಂತೆ ಪ್ರಸಕ್ತ ವರ್ಷ 26.7 ಲಕ್ಷ ಮನೆಗಳ ನಿರ್ಮಾಣವಾಗಿದೆ. ಈವರೆಗೆ ಸುಮಾರು 53.7 ಲಕ್ಷ ಮನೆ ನಿರ್ಮಾಣ ಕಾರ್ಯ ಭರದಿಂದ ನಡೆದಿದೆ. ಸುಮಾರು 30 ಲಕ್ಷ ಮನೆಗಳ ಕಾರ್ಯ ಮುಗಿದಿದ್ದು ವಾಸಕ್ಕೆ ಯೋಗ್ಯವಾಗಿವೆ. 8 ಲಕ್ಷ ಮನೆಗಳು ವಾಸಿಗಳನ್ನು ಕೈ ಬೀಸಿ ಕರೆಯುತ್ತಿವೆ.

ಮನೆಗಳ ಕಟ್ಟಲು ಸಮಯ ಹಿಡಿಯುತ್ತದೆ. ಹಲವು ಮನೆಗಳ ಮುಕ್ತಾಯ ಕಾರ್ಯ 18 ತಿಂಗಳಲ್ಲಿ ಮುಗಿದ್ರೆ, ಇನ್ನು ಉಳಿದ ಮನೆಗಳ ಕಾರ್ಯ 30 ರಿಂದ 36 ತಿಂಗಳುಗಳಲ್ಲಿ ಮುಗಿಯಲಿದೆ ಎಂದು ತಿಳಿದು ಬಂದಿದೆ.

ದೇಶವಾಸಿಗಳಿಗೆ ಸೂರು ಕಲ್ಪಿಸುವ ಕಾರ್ಯಕ್ಕೆ ಹಲವು ಸರ್ಕಾರಗಳು ವಿಭಿನ್ನ ಹೆಸರಿನಲ್ಲಿ ಯೋಜನೆ ಆರಂಭಿಸಿದ್ದವು. 2015ರ ನಂತರ ಈ ಯೋಜನೆಗೆ ಪ್ರಧಾನ ಮಂತ್ರಿ ಆವಾಸ್ ಯೋಜನಾ ಎಂದು ಹೆಸರು ಇಡಲಾಗಿದೆ. ದೇಶದ ಪ್ರತಿ ನಿವಾಸಿಗೆ ಕೈಗೆಟಕುವ ದರದಲ್ಲಿ ಮನೆ ನಿರ್ಮಿಸುವ ಕನಸು ಕೇಂದ್ರ ಸರ್ಕಾರದ್ದಾಗಿದೆ 2022 ರ ಒಳಗೆ ಕೇಂದ್ರ ಸರ್ಕಾರ ಎಲ್ಲರಿಗೂ ಸೂರು ಒದಗಿಸುವ ಗುರಿ ಹೊಂದಿದೆ.

ಮನೆ ನಿರ್ಮಾಣಕ್ಕೆ ಮೋದಿ ಸರ್ಕಾರ ಮೂರು ವರ್ಷಗಳಲ್ಲಿ 78,008.36 ಕೋಟಿ ರೂ. ಮಂಜೂರು ಮಾಡಿದೆ. ಅನುಮೋದಿಸಿದ ಹಣದಲ್ಲಿ 27,653.88 ಕೋಟಿ ಇಲಾಖೆಗೆ ತಲುಪಿದ್ದು, ಸುಮಾರು 9,565 ಕೋಟಿ ಹಣವನ್ನು ಮನೆ ನಿರ್ಮಾಣಕ್ಕೆ ಖರ್ಚು ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...