alex Certify
ಕನ್ನಡ ದುನಿಯಾ       Mobile App
       

Kannada Duniya

ಕಾರು ಪ್ರಿಯರಿಗೊಂದು ಸಂತಸದ ಸುದ್ದಿ…!

ಕಾರು ಪ್ರಿಯರಿಗೆ ಇದೊಂದು ಸಂತಸದ ಸುದ್ದಿ. ಕಾರು ಉತ್ಪಾದನಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಜುಕಿ ಕಂಪನಿ ಇದೀಗ ಹೊಸ ಸ್ವಿಫ್ಟ್ ಕಾರುಗಳನ್ನು 4.99 ಲಕ್ಷ ರೂ.ಗೆ ನೀಡಲು ಮುಂದಾಗಿದೆ. ಹಬ್ಬದ ಸೀಸನ್ ಹಿನ್ನೆಲೆಯಲ್ಲಿ ಈ ಕೊಡುಗೆ ನೀಡಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಲಿಮಿಟಿಡ್ ಎಡಿಷನ್‍ನ ಈ ಕಾರುಗಳು ಎಎಕ್ಸ್ಐ/ಎಲ್‍ಡಿಐ ವೇರಿಯಂಟ್‍ಗಳಲ್ಲಿ ಲಭ್ಯ ಇರಲಿವೆ. ಲಿಮಿಟೆಡ್ ಎಡಿಷನ್ ಮಾರುತಿ ಸ್ವಿಫ್ಟ್ ಕಾರುಗಳಲ್ಲಿ ಬ್ಲೂಟೂತ್ ಸ್ಟೀರಿಯೋ, ಫ್ರಂಟ್ ಪವರ್ ವಿಂಡೋಸ್, ರಿವರ್ಸ್ ಪಾರ್ಕಿಂಗ್ ಸೆನ್ಸರ್ಸ್, ಸೆಂಟ್ರಲ್ ಲಾಕಿಂಗ್ ವಿದ್ ರಿಮೋಟ್ ಕಂಟ್ರೋಲ್, ಬ್ಲ್ಯಾಕ್ ವ್ಹೀಲ್ ಕ್ಯಾಪ್ಸ್ ಗಳು ಹೆಚ್ಚುವರಿಯಾಗಿ ಇರಲಿವೆ.

ಜೊತೆಗೆ ಬೇಸಿಕ್ ಮಾಡೆಲ್‍ನಲ್ಲಿ ಇರುವಂಥ ಡ್ಯುಯಲ್ ಏರ್ ಬ್ಯಾಗ್ಸ್, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್, ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಮತ್ತು ಬ್ರೇಕ್ ಅಸಿಸ್ಟ್ ಮುಂತಾದ ಸುರಕ್ಷತಾ ವ್ಯವಸ್ಥೆಗಳು ಇದ್ದೇ ಇರುತ್ತವೆ ಎಂದಿರುವ ಕಂಪನಿ, ಲಿಮಿಟೆಡ್ ಎಡಿಷನ್‍ನಿಂದ ಕಾರು ಮಾರಾಟ ವೃದ್ಧಿಸುವ ನಿರೀಕ್ಷೆ ಹೊಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...