alex Certify
ಕನ್ನಡ ದುನಿಯಾ       Mobile App
       

Kannada Duniya

ಮಾರುತಿ ಕಾರು ಪ್ರಿಯರಿಗೆ ಬೆಲೆ ಏರಿಕೆ ‘ಶಾಕ್’

ಭಾರತದ ಅತಿ ದೊಡ್ಡ ಕಾರು ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ ಗ್ರಾಹಕರಿಗೆ ಶಾಕ್ ಕೊಟ್ಟಿದೆ. ಕಾರುಗಳ ಬೆಲೆಯಲ್ಲಿ ದಿಢೀರ್ ಏರಿಕೆ ಮಾಡಿದೆ. 1700-17,000 ರೂಪಾಯಿ ವರೆಗೆ ವಿವಿಧ ಮಾಡೆಲ್ ನ ಕಾರುಗಳ ದರವನ್ನು ಹೆಚ್ಚಳ ಮಾಡಲಾಗಿದೆ.

ಕಚ್ಚಾ ಸಾಮಗ್ರಿಗಳು ದುಬಾರಿಯಾಗಿರೋದ್ರಿಂದ ಕಾರುಗಳ ತಯಾರಿಕೆಯ ವೆಚ್ಚವೂ ಹೆಚ್ಚಾಗಿದೆ. ಹಾಗಾಗಿ ದರ ಏರಿಕೆ ಅನಿವಾರ್ಯವಾಗಿತ್ತು ಅಂತಾ ಸಂಸ್ಥೆ ತಿಳಿಸಿದೆ. ಬಲೆನೋ, ಡಿಸೈರ್, ಆಲ್ಟೋ 800, ಸ್ವಿಫ್ಟ್, ವ್ಯಾಗನಾರ್ ಸೇರಿದಂತೆ ಬಹುತೇಕ ಎಲ್ಲಾ ಮಾಡೆಲ್ ಕಾರುಗಳ ಬೆಲೆಯಲ್ಲೂ ಅಲ್ಪ ಏರಿಕೆಯಾಗಿದೆ.

ಟಾಟಾ ಮೋಟಾರ್ಸ್ ಕೂಡ ಜನವರಿ 1ರಿಂದ ಅನ್ವಯವಾಗುವಂತೆ ಕಾರುಗಳ ಬೆಲೆಯನ್ನು 25,000 ರೂ. ವರೆಗೂ ಹೆಚ್ಚಳ ಮಾಡಿತ್ತು. ಹುಂಡೈ ಮೋಟರ್ ಇಂಡಿಯಾ, ಮಹಿಂದ್ರಾ & ಮಹಿಂದ್ರಾ ಮತ್ತು ಹೋಂಡಾ ಕಾರ್ಸ್ ಕಂಪನಿಗಳು ಕೂಡ ಈ ತಿಂಗಳಿನಿಂದ್ಲೇ ಕಾರುಗಳ ಬೆಲೆ ಏರಿಕೆ ಮಾಡುವುದಾಗಿ ಪ್ರಕಟಿಸಿವೆ.

 

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...