alex Certify
ಕನ್ನಡ ದುನಿಯಾ       Mobile App
       

Kannada Duniya

ಕೊನೆಗೂ ಮೌನ ಮುರಿದ ಫೇಸ್ಬುಕ್ ಒಡೆಯ

ಫೇಸ್ಬುಕ್ 50 ಮಿಲಿಯನ್ ಬಳಕೆದಾರರ ಡೇಟಾ ಸೋರಿಕೆ ಮಾಡಿರುವ ಬಗ್ಗೆ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ಕೊನೆಗೂ ಮೌನ ಮುರಿದಿದ್ದಾರೆ. ಜನರ ನಂಬಿಕೆಗೆ ದ್ರೋಹ ಬಗೆದಿದ್ದಕ್ಕೆ ಕ್ಷಮೆ ಕೇಳಿದ್ದಾರೆ. ಫೇಸ್ಬುಕ್ ತಪ್ಪು ಮಾಡಿರೋದಾಗಿ ಒಪ್ಪಿಕೊಂಡಿದ್ದಾರೆ.

ಬಳಕೆದಾರರ ಡೇಟಾವನ್ನು ಸಂರಕ್ಷಿಸುವುದು ಫೇಸ್ಬುಕ್ ನ ಕರ್ತವ್ಯವಾಗಿತ್ತು. ಆದ್ರೆ ಅದರಲ್ಲಿ ತಾನು ಎಡವಿದ್ದೇನೆ ಅಂತಾ ಹೇಳಿದ್ದಾರೆ. ಜನರ ಸೇವೆಗೆ ಅವಕಾಶ ಪಡೆಯಲು ತಾವು ಅರ್ಹರಲ್ಲ ಅಂತಾ ನುಡಿದಿದ್ದಾರೆ. ಭವಿಷ್ಯದಲ್ಲಿ ಇಂತಹ ತಪ್ಪುಗಳಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.

2016ರಲ್ಲಿ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ 50 ಮಿಲಿಯನ್ ಫೇಸ್ಬುಕ್ ಬಳಕೆದಾರರ ಡೇಟಾ ಕಳವು ಮಾಡಲಾಗಿತ್ತು ಎಂಬ ಬಗ್ಗೆ ಕೇಂಬ್ರಿಡ್ಜ್ ಎನಲಿಟಿಕಾ ವರದಿ ಮಾಡಿತ್ತು. ಇದರ ಬೆನ್ನಲ್ಲೇ ಫೇಸ್ಬುಕ್ ಷೇರುಗಳ ಮೌಲ್ಯ ಶೇ.8ರಷ್ಟು ಕುಸಿತ ಕಂಡಿತ್ತು. ಕಂಪನಿಯ ಮೌಲ್ಯ 46 ಬಿಲಿಯನ್ ಡಾಲರ್ ನಷ್ಟು ಕಡಿಮೆಯಾಗಿತ್ತು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...