alex Certify
ಕನ್ನಡ ದುನಿಯಾ       Mobile App
       

Kannada Duniya

ಡ್ರಾಪ್ ಔಟ್ ಆಗಿದ್ದ ಫೇಸ್ ಬುಕ್ ಜನಕನಿಗೆ ಪದವಿ

mark-zu

ಸ್ಯಾನ್ ಫ್ರಾನ್ಸಿಸ್ಕೋ: ಜಗತ್ತಿನ ಅತಿ ದೊಡ್ಡ ಶ್ರೀಮಂತರ ಪೈಕಿ ಒಬ್ಬರಾದ ಹಾಗೂ ಸಾಮಾಜಿಕ ಜಾಲತಾಣ ಫೇಸ್ ಬುಕ್ ಜನಕನಾಗಿರುವ, ಮಾರ್ಕ್ ಜುಕರ್ ಬರ್ಗ್ ಈಗ ಪದವೀಧರನಾಗುತ್ತಿದ್ದಾರೆ.

ಡ್ರಾಪ್ ಔಟ್ ಆಗಿದ್ದ ಜುಕರ್ ಬರ್ಗ್ ಮೇ ನಲ್ಲಿ ಪದವೀಧರರಾಗಲಿದ್ದಾರೆ. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪದವಿ ಓದುವಾಗ ಅರ್ಧಕ್ಕೆಓದು ನಿಲ್ಲಿಸಿದ್ದ ಜುಕರ್ ಬರ್ಗ್ ನಂತರದಲ್ಲಿ ಮಾಡಿದ್ದೆಲ್ಲಾ ಇತಿಹಾಸ.

ಫೇಸ್ ಬುಕ್ ಅನ್ನು ವಿಶ್ವದ ನಂಬರ್ 1 ಸಾಮಾಜಿಕ ಜಾಲತಾಣವಾಗಿ ರೂಪಿಸಿದ ಅವರು, ಈಗ ಅದೇ ಹಾರ್ವರ್ಡ್ ವಿಶ್ವ ವಿದ್ಯಾಲಯದಿಂದ ಪದವಿ ಪಡೆಯುತ್ತಿದ್ದಾರೆ.

ಫೇಸ್ ಬುಕ್ ಅನ್ನು 200 ಕೋಟಿ ಮಂದಿ ಬಳಸುತ್ತಿದ್ದಾರೆ. ಜಗತ್ತಿನ ಮತ್ತೊಂದು ದೈತ್ಯ ಸಂಸ್ಥೆ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಕೂಡ ಹಾರ್ವರ್ಡ್ ವಿವಿಯ ಡ್ರಾಪ್ ಔಟ್ ವಿದ್ಯಾರ್ಥಿಯಾಗಿದ್ದಾರೆ.

ಬಿಲ್ ಗೇಟ್ಸ್ ಅವರ ಬಳಿ ಮಾತನಾಡುತ್ತಿದ್ದ ಜುಕರ್ ಬರ್ಗ್ ತಾವು ಪದವೀಧರರಾಗುತ್ತಿರುವ ವಿಷಯವನ್ನು ಹಂಚಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...