alex Certify
ಕನ್ನಡ ದುನಿಯಾ       Mobile App
       

Kannada Duniya

ಕೈಗೆಟುಕುವ ದರದಲ್ಲಿ ಸಿಗ್ತಿವೆ ದುಬಾರಿ ಸ್ಮಾರ್ಟ್ ಫೋನ್ಸ್

ಐಫೋನ್ ಎಕ್ಸ್, ಸ್ಯಾಮ್ಸಂಗ್  ಗ್ಯಾಲಕ್ಸಿ ನೋಟ್ 8 ನಂತಹ ಸ್ಮಾರ್ಟ್ ಫೋನ್ ಗಳು ಜನಸಾಮಾನ್ಯರ ಕೈಗೆಟುಕುವ ದರದಲ್ಲಿಲ್ಲ. ಆದ್ರೆ ಎಲ್ಲಾ ಫೀಚರ್ ಗಳಿರುವ ಮಿಡ್ ರೇಂಜ್ ಫೋನ್ ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಲಕ್ಷಗಟ್ಟಲೆ ಹಣ ಕೊಟ್ಟು ಮೊಬೈಲ್ ಖರೀದಿಸೋದಕ್ಕಿಂತ ಇವುಗಳನ್ನು ಕೊಂಡುಕೊಂಡ್ರೆ ಪೈಸಾ ವಸೂಲ್ ಪಕ್ಕಾ. ಆ ಮೊಬೈಲ್ ಗಳು ಯಾವ್ಯಾವುದು ಅನ್ನೋದನ್ನ ನೋಡೋಣ.

ಆ್ಯಪಲ್ ಐಫೋನ್ 6ಎಸ್ : ಆ್ಯಪಲ್ ಕಡಿಮೆ ಬೆಲೆಗೆ ಮೊಬೈಲ್ ಗಳನ್ನು ಬಿಡುಗಡೆ ಮಾಡೋದೇ ಇಲ್ಲ. ಹೊಸ ವರ್ಷನ್ ಬಂದ್ಮೇಲೆ ಹಳೆ ಮಾಡೆಲ್ ಸ್ಮಾರ್ಟ್ ಫೋನ್ ಬೆಲೆ ಕಡಿಮೆ ಆಗುತ್ತೆ ಅಷ್ಟೆ. ಐಫೋನ್ 6ಎಸ್ ಖರೀದಿಯಿಂದ ನಿಮ್ಮ ಜೇಬಿಗೂ ಕತ್ತರಿ ಬೀಳೋದಿಲ್ಲ. ಯಾಕಂದ್ರೆ ಈ ಮೊಬೈಲ್ ಮೇಲೆ ಸಾಕಷ್ಟು ಡಿಸ್ಕೌಂಟ್ ಕೂಡ ದೊರೆಯುತ್ತಿದೆ. ದೀಪಾವಳಿ ಆಫರ್ ನಲ್ಲೂ ನೀವಿದನ್ನು ಕೊಂಡುಕೊಳ್ಳಬಹುದು.

ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 7 : ಈ ಫೋನ್ ಬಿಡುಗಡೆಯಾದಾಗ ಉಳಿದ ಕಂಪನಿಗಳ ಮೊಬೈಲ್ ಗೆ ಭಾರೀ ಪೈಪೋಟಿ ನೀಡಿತ್ತು. ಈಗಲೂ ಇದಕ್ಕೆ ಬಹುಬೇಡಿಕೆ ಇದೆ. ಅತ್ಯದ್ಭುತವಾದ ಅಪ್ಲಿಕೇಶನ್ ಗಳು, ಗೇಮ್ಸ್ ಇದರಲ್ಲಿವೆ. ಬಜೆಟ್ ಫ್ರೆಂಡ್ಲಿಯೂ ಹೌದು.

ವನ್ ಪ್ಲಸ್ 3ಟಿ : ವನ್ ಪ್ಲಸ್ ಮೊಬೈಲ್ ಗಳು ಬಹುಬೇಗನೆ ಜನಪ್ರಿಯತೆ ಗಿಟ್ಟಿಸಿಕೊಂಡಿವೆ. ಆ್ಯಪಲ್ ನಂತೆ ವನ್ ಪ್ಲಸ್ ಕೂಡ ಮಿಡ್ ರೇಂಜ್ ಮೊಬೈಲ್ ಗಳನ್ನು ಲಾಂಚ್ ಮಾಡುವುದಿಲ್ಲ. ಹಳೆ ಮಾದರಿಯ ಫೋನ್ ಗಳು ಕಡಿಮೆ ಬೆಲೆಗೆ ಸಿಗುತ್ತವೆ. 16 ಎಂಪಿ ಫ್ರಂಟ್ ಫೇಸಿಂಗ್ ಕ್ಯಾಮರಾ ಹೊಂದಿರೋ ವನ್ ಪ್ಲಸ್ 3ಟಿ ಈಗ್ಲೂ ಹಾಟ್ ಕೇಕ್ ನಂತೆ ಸೇಲ್ ಆಗ್ತಿದೆ.

ಎಲ್ ಜಿ ಜಿ6 : ಈ ವರ್ಷ ಫೆಬ್ರವರಿಯಲ್ಲಿ ಬಿಡುಗಡೆಯಾಗಿದ್ದ ಈ ಮೊಬೈಲ್ ನಲ್ಲಿ ಕ್ಯಾಮರಾ ಅದ್ಭುತವಾಗಿದೆ. ಲಾಂಚ್ ಆಗಿ ಕೆಲವೇ ದಿನಗಳಲ್ಲಿ ಈ ಸ್ಮಾರ್ಟ್ ಫೋನ್ ನ ಬೆಲೆ ಕೂಡ ಭಾರೀ ಇಳಿಕೆ ಕಂಡಿದೆ. ಇದರ ಡಿಸೈನ್ ಹಾಗೂ ಕ್ಯಾಮರಾ ವಿಶಿಷ್ಟವಾಗಿದೆ.

ಲೆನೊವೊ ಝೆಡ್2 ಪ್ಲಸ್ : 2016ರಲ್ಲಿ ಈ ಮೊಬೈಲ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿತ್ತು. ವನ್ ಪ್ಲಸ್ ಹಾಗೂ ಕ್ಸಿಯೋಮಿಯಿಂದ ಭಾರೀ ಪೈಪೋಟಿ ಎದುರಾದ ಹಿನ್ನೆಲೆಯಲ್ಲಿ ಲೆನೊವೊ ಝೆಡ್2 ಪ್ಲಸ್ ಮೊಬೈಲ್ ಬೆಲೆಯಲ್ಲೂ ಕಡಿತ ಮಾಡಲಾಗಿದೆ. ಹಾಗಾಗಿ ಜನಸಾಮಾನ್ಯರು ಕೂಡ ಇದನ್ನು ಖರೀದಿ ಮಾಡಬಹುದು.

ಮೋಟೋ ಝೆಡ್ : ಕಳೆದ ವರ್ಷ ಜೂನ್ ನಲ್ಲಿ ಮಾರುಕಟ್ಟೆಗೆ ಬಂದಿದ್ದ ಈ ಮೊಬೈಲ್ ಭಾರೀ ಜನಪ್ರಿಯವಾಗಿತ್ತು. ಈಗ ಬೆಲೆ ಕೂಡ ಶೇ.25ರಷ್ಟು ಕಡಿಮೆಯಾಗಿದೆ. ಮೋಟೋರೊಲಾದ ವಿಶಿಷ್ಟ ಡಿಸೈನ್ ಜೊತೆಗೆ ಉತ್ಕೃಷ್ಟ ಮಾಡ್ಯುಲರ್ ಟೆಕ್ನಾಲಜಿಯೂ ಇದರಲ್ಲಿದೆ.

 

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...