alex Certify
ಕನ್ನಡ ದುನಿಯಾ       Mobile App
       

Kannada Duniya

ಮಾರುಕಟ್ಟೆಗೆ ಬರ್ತಿದೆ ಶುಂಠಿ ಸುವಾಸನೆಯ ಕಾಂಡೋಮ್

ಕಾಂಡೋಮ್ ಕಂಪನಿಗಳು ಗ್ರಾಹಕರನ್ನು ಸೆಳೆಯಲು ಇನ್ನಿಲ್ಲದ ಪ್ರಯತ್ನ ಮಾಡ್ತಿವೆ. ಹೊಸ ಹೊಸ ಸುವಾಸನೆಯ, ಚುಕ್ಕಿಗಳಿರುವ, ರಾತ್ರಿ ಹೊಳೆಯುವ ಹೀಗೆ ವಿವಿಧ ಬಗೆಯ ಕಾಂಡೋಮ್ ಗಳನ್ನು ಮಾರುಕಟ್ಟೆಗೆ ತರುವ ಪ್ರಯತ್ನದಲ್ಲಿವೆ.

ಕೆಲ ವರ್ಷಗಳ ಹಿಂದೆ ಗ್ಲೋಬಲ್ ಕಾಂಡೋಮ್ ಕಂಪನಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರುಮಾಡಿತ್ತು. ಸುಗಂಧದ, ವಿನೋದವಾದ ಹಾಗೂ ಆಕರ್ಷಕ ಕಾಂಡೋಮ್ ಮಾರುಕಟ್ಟೆಗೆ ತರುವುದಾಗಿ ಹೇಳಿತ್ತು. ಆದ್ರೆ ಕೆಲವೇ ದಿನಗಳಲ್ಲಿ ಅದು ಸುಳ್ಳಾಯ್ತು. ಇದೊಂದು ಪ್ರಚಾರದ ಗಿಮಿಕ್ ಎಂಬುದು ಜನರಿಗೆ ಗೊತ್ತಾಯ್ತು.

ಇದೇ ದಾರಿ ತುಳಿದಿರುವ ಮ್ಯಾನ್ಫೋರ್ಸ್ ಕಂಪನಿ ಈಗ ಶುಂಠಿ ಸುವಾಸನೆಯುಳ್ಳ ಕಾಂಡೋಮ್ ಮಾರುಕಟ್ಟೆಗೆ ತರುವುದಾಗಿ ಹೇಳ್ತಿದೆ. ಇದು ಕೂಡ ಕೇವಲ ಪ್ರಚಾರವ ಎಂಬುದು ಗೊತ್ತಿಲ್ಲ. ಆದ್ರೆ ಕಂಪನಿ ಫೇಸ್ಬುಕ್ ಪೇಜ್ ನಲ್ಲಿ ಈ ಬಗ್ಗೆ ಬರೆದುಕೊಂಡಿದೆ. ಫೇಸ್ಬುಕ್ ಪೇಜ್ ನೋಡ್ತಿದ್ದಂತೆ ಜನರು ತಮ್ಮ ಅಭಿಪ್ರಾಯ ಹೇಳಲು ಶುರುಮಾಡಿದ್ದಾರೆ. ಈ ಹಿಂದೆ ಗ್ಲೋಬಲ್ ಕಾಂಡೋಮ್ ಜಾಹೀರಾತು ನೀಡಿ ಮಾತು ತಪ್ಪಿದೆ. ಈಗ ಇದ್ರ ಸರದಿ ಎಂದು ಜನರು ಕಮೆಂಟ್ ಮಾಡ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...