alex Certify
ಕನ್ನಡ ದುನಿಯಾ       Mobile App
       

Kannada Duniya

ಸಮೋಸಾ ಮಾರ್ತಿದ್ದಾರೆ ಗೂಗಲ್ ಮಾಜಿ ಉದ್ಯೋಗಿ

munaf

ಮುಂಬೈನ ಯುವಕ ಮುನಾಫ್ ಕಪಾಡಿಯಾ ಎಂಬಿಎ ಪದವೀಧರ. ಗೂಗಲ್ ನಲ್ಲಿ ಒಳ್ಳೆಯ ಉದ್ಯೋಗವೂ ಇತ್ತು. ಆದ್ರೆ ಅದನ್ನು ಬಿಟ್ಟು ಮಟನ್ ಸಮೋಸಾ ಮಾರ್ತಿದ್ದಾನೆ. ಇಲ್ಲೊಂದು ಟ್ವಿಸ್ಟ್ ಇದೆ, ಇದ್ರಿಂದ ಬರ್ತಿರೋ ಆದಾಯ ಎಷ್ಟು ಗೊತ್ತಾ? 50 ಲಕ್ಷ ರೂಪಾಯಿ.

ಮುನಾಫ್ ಮತ್ತವನ ತಾಯಿ ನಫೀಸಾ ಜೊತೆಯಾಗಿ ಬೊಹ್ರಿ ಕಿಚನ್ ಅನ್ನೋ ಪುಟ್ಟ ಹೋಟೆಲ್ ನಡೆಸ್ತಿದ್ದಾರೆ. ಗೂಗಲ್ ನಲ್ಲಿ ಕೆಲಸ ಮಾಡುತ್ತಿದ್ದಾಗ್ಲೇ ಸ್ವಂತ ಉದ್ಯಮ ಆರಂಭಿಸಬೇಕು ಅನ್ನೋ ಆಲೋಚನೆ ಮುನಾಫ್ ಗೆ ಬಂದಿತ್ತು. ತಾಯಿಯ ಒಂಟಿತನ ಮತ್ತು ಬೇಸರ ಕಳೆಯುವಂಥದ್ದೇನಾದ್ರೂ ಮಾಡಬೇಕು ಎನಿಸಿತ್ತು.

ಕೊನೆಗೆ ಮುನಾಫ್ ಮಟನ್ ಕೀಮಾ ಸಮೋಸಾ ಮಾಡಲು ಶುರು ಮಾಡಿದ್ರು. ಅಮ್ಮ- ಮಗನ ಈ ಬೊಹ್ರಿ ಕಿಚನ್ ಈಗ ಮುಂಬೈನಲ್ಲಿ ಸಖತ್ ಫೇಮಸ್ ಆಗಿದೆ. ಶನಿವಾರ ಮತ್ತು ಭಾನುವಾರ ಮಾತ್ರ ಬೊಹ್ರಿ ಕಿಚನ್ ನಲ್ಲಿ ಟೇಸ್ಟಿ ಮಟನ್ ಕೀಮಾ ಸಮೋಸಾ ಸಿಗುತ್ತೆ.

ಡೆಸರ್ಟ್ಸ್, ಬಗೆ ಬಗೆಯ ಪಾನೀಯ, ಕಾಂಡಿಮೆಂಟ್ಸ್, 7 ಬಗೆಯ ಪಕ್ವಾನ್ನಗಳುಳ್ಳ ಊಟ ಬೊಹ್ರಿ ಕಿಚನ್ ಸ್ಪೆಷಾಲಿಟಿ. ಕೇವಲ 2 ವರ್ಷಗಳಲ್ಲಿ ಮುನಾಫ್ ತಮ್ಮ ಹೋಟೆಲ್ ಅನ್ನು ಯಶಸ್ವಿ ಉದ್ಯಮವಾಗಿ ಬದಲಾಯಿಸಿದ್ದಾರೆ. ಫೋರ್ಬ್ಸ್ ಸಾಧಕರ ಪಟ್ಟಿಯಲ್ಲಿ ಕೂಡ ಸ್ಥಾನ ಪಡೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...