alex Certify
ಕನ್ನಡ ದುನಿಯಾ       Mobile App
       

Kannada Duniya

ಕೊನೆಗೂ ಹರಾಜಾಯ್ತು ಮಲ್ಯನ ಐಷಾರಾಮಿ ಏರ್ ಬಸ್

ಸಾಲಗಾರ ಉದ್ಯಮಿ ವಿಜಯ್ ಮಲ್ಯ ಒಡೆತನದ ಲಕ್ಷುರಿ ವಿಮಾನವೊಂದು ಭಾರಿ ಬೆಲೆಗೆ ಹರಾಜಾಗಿದೆ. ಮೂರು ಹರಾಜು ಪ್ರಕ್ರಿಯೆಗಳು ವಿಫಲವಾದ ನಂತರದಲ್ಲಿ ನಡೆದ ನಾಲ್ಕನೇ ಹರಾಜು ಪ್ರಕ್ರಿಯೆಯಲ್ಲಿ ಕೊನೆಗೂ ಮಲ್ಯ ಒಡೆತನದ A319 – 133CVT MSN 2650 ಪ್ರೈವೇಟ್ ಜೆಟ್ ಕೊನೆಗೂ 34 ಕೋಟಿ 80ಲಕ್ಷ ರೂಪಾಯಿಗೆ ಹರಾಜಾಗಿದೆ.

ಅಮೆರಿಕಾ ಮೂಲದ ವಿಮಾನಯಾನ ಸಂಸ್ಥೆಯೊಂದು ಮಲ್ಯ ಪ್ರೈವೇಟ್ ಜೆಟ್ ನ್ನ ಹರಾಜು ಪ್ರಕ್ರಿಯೆಯಲ್ಲಿ ತನ್ನದಾಗಿಸಿಕೊಂಡಿದೆ. ಈ ಹಿಂದೆ ಬಾಂಬೆ ಹೈಕೋರ್ಟ್ ಸೂಚನೆಯ ಪ್ರಕಾರ ಸೇವಾ ತೆರಿಗೆ ಇಲಾಖೆ ನಡೆಸಿದ್ದ ಆನ್ಲೈನ್ ಹರಾಜು ಪ್ರಕ್ರಿಯೆಯ ಮೊತ್ತಕ್ಕಿಂತ ಈ ಮೊತ್ತ ಹೆಚ್ಚಾಗಿದೆ.

ಮಲ್ಯ ಬಾಕಿ ಉಳಿಸಿಕೊಂಡಿದ್ದ ಸೇವಾ ತೆರಿಗೆಯ ಮೊತ್ತ ಮತ್ತು ದಂಡವನ್ನು ವಸೂಲಿ ಮಾಡುವ ಹಿನ್ನಲೆಯಲ್ಲಿ ಮಲ್ಯ ಅವರ ಖಾಸಗಿ ವಿಮಾನವನ್ನ ಹರಾಜು ಹಾಕಲಾಗಿದೆ. 25 ಮಂದಿ ಪ್ರಯಾಣಿಕರು ಆರು ಮಂದಿ ಸಿಬ್ಬಂದಿ ಪ್ರಯಾಣಿಸಬಹುದಾಗಿದ್ದ ಈ ಪ್ರೈವೇಟ್ ಜೆಟ್ ತುಂಬಾನೇ ಐಷಾರಾಮಿಯಾಗಿತ್ತು.

ಬೆಡ್ ರೂಮ್, ಬಾತ್ ರೂಮ್, ಕಾನ್ಫರೆನ್ಸ್ ಸ್ಥಳ ಮತ್ತು ಬಾರ್ ಅನುಕೂಲಗಳು ಈ ಜೆಟ್ ನಲ್ಲಿತ್ತು. ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿದ್ದ ವಿಮಾನದ ಹರಾಜಿಗಿಡೋಕೆ ಸೇವಾ ತೆರಿಗೆ ಸಿಬ್ಬಂದಿ ಕೋರ್ಟ್ ಮೊರೆ ಹೋಗಿದ್ದರು. ಈ ವಿಮಾನದ ನಿರ್ವಹಣೆಗಾಗಿಯೇ ಗಂಟೆಗೆ 13 ರಿಂದ 15 ಸಾವಿರ ರೂಪಾಯಿ ಖರ್ಚಾಗುತ್ತಿತ್ತಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...