alex Certify
ಕನ್ನಡ ದುನಿಯಾ       Mobile App
       

Kannada Duniya

ಮಲ್ಯರನ್ನು ಕರೆತರಲು ಕನಿಷ್ಠ 6 ತಿಂಗಳು ಬೇಕೇಬೇಕು

mallya_1492659737_749x421

ಭಾರತೀಯ ಬ್ಯಾಂಕ್ ಗಳಿಗೆ 9 ಸಾವಿರ ಕೋಟಿ ರೂ. ಪಂಗನಾಮ ಹಾಕಿ ಲಂಡನ್ ಗೆ ಓಡಿ ಹೋಗಿರುವ ಮದ್ಯದ ದೊರೆ ವಿಜಯ್ ಮಲ್ಯ ಮತ್ತೆ ಸುದ್ದಿಯಲ್ಲಿದ್ದಾರೆ. ಎರಡು ದಿನಗಳ ಹಿಂದೆ ಮಲ್ಯರನ್ನು ಲಂಡನ್ ಪೊಲೀಸರು ಬಂಧಿಸಿದ್ರು. ಮಲ್ಯ ಬಂಧನವಾಗ್ತಾ ಇದ್ದಂತೆ ಇನ್ನೇನು ಮಲ್ಯರನ್ನು ಲಂಡನ್ ಸರ್ಕಾರ ಭಾರತಕ್ಕೆ ಹಸ್ತಾಂತರಿಸಿಯೇ ಬಿಡ್ತು ಎನ್ನುವಷ್ಟರ ಮಟ್ಟಿಗೆ ಮಾಧ್ಯಮಗಳು ಸುದ್ದಿ ಪ್ರಸಾರ ಮಾಡಿದ್ದವು.

ಜನರು ಕೂಡ ಮಲ್ಯ ಆದಷ್ಟು ಬೇಗ ಭಾರತಕ್ಕೆ ಬರ್ತಾರೆ. ಬಡ, ಮಧ್ಯಮ ವರ್ಗದವರ ಹಣ ದೋಚಿ ಐಷಾರಾಮಿ ಜೀವನ ನಡೆಸುತ್ತಿರುವ ವ್ಯಕ್ತಿಗೆ ತಕ್ಕ ಶಾಸ್ತಿಯಾಗಬೇಕೆಂದು ಮಾತನಾಡಿದ್ರು. ಆದ್ರೆ ಹೇಳಿದಷ್ಟು ಸುಲಭವಲ್ಲ ಮಲ್ಯ ಹಸ್ತಾಂತರ. ಸಿಬಿಐ ಹಾಗೂ ಇಡಿ ತಂಡವೊಂದು ಲಂಡನ್ ಗೆ ಹೋಗಲಿದೆ ಎಂಬ ಸುದ್ದಿ ಇದೆ. ಆದ್ರೆ ಯುಕೆಯಿಂದ ಮಲ್ಯ ಹಸ್ತಾಂತರ ಎರಡು ಮೂರು ದಿನಗಳಲ್ಲಿ ಆಗುವಂತಹದ್ದಲ್ಲ. ಸುಮಾರು 6-12 ತಿಂಗಳು ಬೇಕು ಎಂದು ಇಡಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಲಂಡನ್ ಸ್ಥಳೀಯ ನ್ಯಾಯಾಲಯದಲ್ಲಿ ಸುಮಾರು 12 ಕ್ಕೂ ಹೆಚ್ಚು ಬಾರಿ ವಿಚಾರಣೆ ನಡೆಯಲಿದೆ. ಜೊತೆಗೆ ಯುಕೆ ಹೈಕೋರ್ಟ್ ಗೆ ಹೋಗುವ ಅವಕಾಶವೂ ಇದೆ. ಮಲ್ಯಗೆ ಬೇಲ್ ಸಿಕ್ಕಿದ್ದು ನಿರಾಸೆಯಾಗಿಲ್ಲ. ನಾವು ಇದಕ್ಕೂ ಒಂದು ಹೆಜ್ಜೆ ಮುಂದೆ ಯೋಚನೆ ಮಾಡ್ತಿದ್ದೇವೆ. ಆದ್ರೆ ಇದೊಂದು ದೊಡ್ಡ ಪಯಣ ಎಂದು ಅಧಿಕಾರಿಗಳು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...