alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಸ್ಪೋರ್ಟ್ ಪಡೆಯುವ ನಿಯಮದಲ್ಲಿ ಬದಲಾವಣೆ

ಪಾಸ್ಪೋರ್ಟ್ ಪಡೆಯುವುದು ಈಗ ಬಹಳ ಸುಲಭ. ಪಾಸ್ಪೋರ್ಟ್ ನಿಯಮದಲ್ಲಿ ವಿದೇಶಾಂಗ ಸಚಿವಾಲಯ ಕೆಲವೊಂದು ಬದಲಾವಣೆಗಳನ್ನು ಮಾಡಿದೆ. ಈ ಹಿಂದೆ ಪಾಸ್ಪೋರ್ಟ್ ಪಡೆಯಲು ಜನನ ದಾಖಲೆ ಕಡ್ಡಾಯವಾಗಿತ್ತು. ಆದ್ರೆ ಆ ನಿಯಮವನ್ನು ವಿದೇಶಾಂಗ ಸಚಿವಾಲಯ ಬದಲಾಯಿಸಿದೆ.

ಜನವರಿ 26,1989 ಮತ್ತು ನಂತರ ಜನಿಸಿದವರು ಕಡ್ಡಾಯವಾಗಿ ಜನನ ದಾಖಲೆ ನೀಡಬೇಕಿತ್ತು. ಆದ್ರೀಗ ಪುರಸಭೆ ರಿಜಿಸ್ಟ್ರಾರ್, ಜನನ ಮತ್ತು ಮರಣ ದಾಖಲೆಗೆ ಮಾನ್ಯವಾಗಿರುವ ರಿಜಿಸ್ಟ್ರಾರ್ ಮತ್ತು ಪ್ರಮಾಣೀಕೃತ ಪ್ರಾಧಿಕಾರ ನೀಡುವ ಜನನ ಪತ್ರವನ್ನು ಮಾನ್ಯ ಮಾಡಲಾಗುವುದು.

ಇದ್ರ ಜೊತೆಗೆ ಯಾವುದೇ ಶೈಕ್ಷಣಿಕ ಸಂಸ್ಥೆಯ ಟ್ರಾನ್ಸ್ಫರ್ ಸರ್ಟಿಫಿಕೇಟ್ ಕೂಡ ಮಾನ್ಯವಾಗಲಿದೆ. ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಇ-ಆಧಾರ್, ಚಾಲನಾ ಪರವಾನಿಗೆ, ವೋಟರ್ ಐಡಿಯನ್ನು ದಾಖಲೆ ರೂಪದಲ್ಲಿ ನೀಡಬಹುದಾಗಿದೆ.

ಅರ್ಜಿಯಲ್ಲಿ ತಂದೆ-ತಾಯಿ ಬಗ್ಗೆ ಮಾಹಿತಿ ನೀಡುವ ಅಗತ್ಯವಿಲ್ಲ. ನಿಮ್ಮ ಗುರುವಿನ ಹೆಸರನ್ನು ಬೇಕಾದ್ರೂ ಅಲ್ಲಿ ಬರೆಯಬಹುದಾಗಿದೆ. ವಿದೇಶಾಂಗ ಸಚಿವಾಲಯ ಪಾಸ್ಪೋರ್ಟ್ ಅರ್ಜಿಯಲ್ಲೂ ಬದಲಾವಣೆ ಮಾಡಿದೆ. 15 ಕಾಲಂ ಬದಲು ಈಗ 9 ಕಾಲಂ ತುಂಬಿದ್ರೆ ಸಾಕು. ಎ, ಸಿ, ಡಿ, ಇ, ಜೆ ಮತ್ತು ಕೆ ಕಾಲಂ ತೆಗೆದು ಹಾಕಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...